ನದಿಗಳನ್ನು ಭಕ್ತಿಭಾವದಿಂದ ನೋಡಬೇಕು ಎಂದು ಹುಕ್ಕೇರಿ ಹಿರೇಮಠದ ಚಂದ್ರಶೇಖರ ಮಹಾಸ್ವಾಮಿಗಳು ಹೇಳಿದರು.
ಅವರು ಹುಕ್ಕೇರಿ ತಾಲೂಕಿನ ಬಡಕುಂದ್ರಿ ಹೋಳೆಮ್ಮಾ ದೇವಸ್ಥಾನದ ಹಿರಣ್ಯಕೇಶಿ ನದಿಗೆ ಮಹಾ ಆರತಿ ನೇರವೇರಿಸಿ ಮಾತನಾಡಿದರು.
ಹುಕ್ಕೇರಿ ತಾಲೂಕಿನ ಬಡಕುಂದ್ರಿ ಹೋಳೆಮ್ಮಾ ದೇವಸ್ಥಾನದಲ್ಲಿ ಕಾರ್ತಿಕ ಮಾಸ ದೀಪೋತ್ಸವ ಪ್ರಯುಕ್ತ ಟ್ರಸ್ಟ ಕಮಿಟಿ ಹಮ್ಮಿಕೊಂಡ ಗಂಗಾರತಿ ಸಮಾರಂಭವು ಹತ್ತರಗಿ ಕಾರಿಮಠದ ಗುರುಸಿದ್ದಮಹಾಸ್ವಾಮಿಗಳು , ಹುಣಸಿಕೋಳ್ಳ ಮಠದ ರಾಚೋಟಿ ಶ್ರೀಗಳು ಮತ್ತು ಕ್ಯಾರಗುಡ್ಡದ ಅಭಿನವ ಮಂಜುನಾಥ ಮಹಾರಾಜರ ದಿವ್ಯ ಸಾನಿಧ್ಯದಲ್ಲಿ ಜರುಗಿತು ಸಮಾರಂಭದಲ್ಲಿ ಹಿರಣ್ಯಕೇಶಿ ನದಿಗೆ ಮಹಾಮಂಗಳಾರತಿ ಮಾಡುವ ಮೂಲಕ ಭಕ್ತರು ಆಚರಣೆ ಮಾಡಿದರು..
ಭಕ್ತರು ನದಿಯಲ್ಲಿ ದೀಪದ ತೇಪ್ಪೋತ್ಸವ ಜರುಗಿಸಿ ದೇವಿಯ ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸಿದರು.
ಇನ್ ನ್ಯೂಸ್ ಜೋತೆ ಮಾತನಾಡಿದ ಹುಣಶಿಕಟ್ಟಿ ರಾಚೋಟಿ ಸ್ವಾಮಿಗಳು ಸಂಪ್ರದಾಯ , ಧರ್ಮದ ರಕ್ಷಣೆ ಮತ್ತು ಪಾಲನೆ ನಮಗೆ ಅವಶ್ಯವಾಗಿದೆ ಉತ್ತರ ಭಾರತದಲ್ಲಿ ಗಂಗಾರತಿ ರೀತಿಯಲ್ಲಿ ಹೋಳೆಮ್ಮಾದೇವಿ ಸನ್ನಿಧಾನದಲ್ಲಿ ಗಂಗಾರತಿ ಆಚರಿಸುತ್ತಿರುವದು ಸಂತೋಷ ದಾಯಕವಾಗಿದೆ ಎಂದರು
ಹತ್ತರಗಿಯ ಗುರುಸಿದ್ದ ಮಹಾಸ್ವಾಮಿಗಳು ಮಾತನಾಡಿ ಕಳೆದ ಮೂರು ವರ್ಷಗಳಿಂದ ಮುಖ್ಯ ಅರ್ಚಕ ಎಚ್ ಎಲ್ ಪೂಜೇರಿ ನೇತೃತ್ವದಲ್ಲಿ ನದಿ ಸ್ವಚ್ಚತೆ ಆದ್ಯತೆ ನೀಡಿ ಮಹಾ ಮಂಗಳಾರತಿ ಪೂಜೇ ನೇರವೆರಿಸುತ್ತಿರುವುದು ಶ್ಲಾಘನಿಯವಾಗಿದೆ ಎಂದರು
ಮಹಾ ಆರತಿ ಅಂಗವಾಗಿ ದೇವಸ್ಥಾನದಲ್ಲಿ ವಿಷೇಶ ದೀಪಾಲಂಕಾರ ಮತ್ತು ಭಕ್ತರಿಗೆ ಮಹಾ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.
ಬೆಳಗಾವಿ ಹುಕ್ಕೇರಿ ಹಿರೇಮಠದ ಶ್ರೀ ಷ ಬ್ರ ಚಂದ್ರಶೇಖರ ಮಹಾಸ್ವಾಮಿಗಳು ಮಾತನಾಡಿ ಕಾಶಿಯಲ್ಲಿ ಗಂಗಾನದಿಗೆ ಗಂಗಾರತಿ ಮಾಡುವ ರೀತಿಯಲ್ಲಿ ನಮ್ಮ ಭಾಗದ ನದಿಗಳನ್ನು ಭಕ್ತಿ ಭಾವದಿಂದ ನೋಡಬೇಕು ಇದರಿಂದ ನದಿಗಳು ಸ್ವಚ್ಚವಾಗಿರುತ್ತವೆ ಎಂದರು .
ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತ ಸದಸ್ಯ ಪವನ ಕತ್ತಿ, ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಮತಿ ಪ್ರಭಾವತಿ ಪಾಟೀಲ, ಮುಖ್ಯ ಅರ್ಚಕ ಎಚ್ ಎಲ್ ಪೂಜಾರ, ಸಿದ್ದು ಮಾನಗಾಂವಿ, ಪಿ ಎ ವಾಸೇದಾರ, ಪಿ ಬಿ ಮಗದುಮ್ಮ, ಶಿವಾನಂದ ಮಾನಗಾಂವಿ, ಸಿ ಎಸ್ ನಿಪ್ಪಾಣಿ, ಬಾಬುಗೌಡ ಪಾಟೀಲ, ಲಕ್ಕಪ್ಪಾ ಪೂಜೇರಿ ಹಾಗೂ ಅಪಾರ ಭಕ್ತ ಸಮೂಹ ಹಾಜರಿದ್ದರು.