Kagawad

ಶೇಡಬಾಳದ ಅರ್ಬನ್ ಕೋ-ಆಫ್ ಬ್ಯಾಂಕ ಆದರ್ಶ ಬ್ಯಾಂಕ.

Share

ಶೇಡಬಾಳ ಪಟ್ಟಣದ ದಿ. ಶೇಡಬಾಳ ಅರ್ಬನ್ ಕೋಆಫ್ ಬ್ಯಾಂಕಿಗೆ 2021-22 ನೇ ಸಾಲಿನ ಬೆಳಗಾವಿ ಜೆಲ್ಲಿಯ ಅತ್ಯುತ್ತಮ ಬ್ಯಾಂಕ ಪ್ರಶಸ್ತಿ ಪಡೆದುಕೊಂಡಿದೆ.

ಇತ್ತಿಚಿಗೆ ಬೆಳಗಾವಿ ಮರಾಠಾ ಕೋ ಆಫ್ ಬ್ಯಾಂಕಿನ ಸಭಾಂಗಣದಲ್ಲಿ ಬೆಳಗಾವಿ ಜಿಲ್ಲಾ ಪಟ್ಟಣ/ಸೌಹಾರ್ದ ಸಹಕಾರಿ ಬ್ಯಾಂಕ ಸಂಘ ಆಯೋಜಿಸಿದ್ದ 2021-22 ನೇ ಸಾಲಿನ ವಾರ್ಷಿಕ ಮಹಾಸಭೆಯ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷರಾದ ಬಿ.ಬಿ. ಕಗ್ಗನಗಿ, ಉಪಾಧ್ಯಕ್ಷರಾದ ಬಿ.ಎಸ್.ಕಾಕಟಕರ ಮೊದಲಾದ ಪದಾಧಿಕಾರಿಗಳು ದಿ. ಶೇಡಬಾಳ ಅರ್ಬನ್ ಕೋ-ಆಫ್ ಬ್ಯಾಂಕಿನ ನಿರ್ದೇಶಕರಾದ ಭರತೇಶ (ಲಕಮಗೌಡ) ಪಾಟೀಲ ಇವರಿಗೆ ಆತ್ಯುತ್ತಮ ಬ್ಯಾಂಕ ಪ್ರಶಸ್ತಿ ಪತ್ರ ನೀಡಿ ಶಾಲು ಹೊದಿಸಿ ಸತ್ಕರಿಸಿ ದಿ. ಶೇಡಬಾಳ ಅರ್ಬನ್ ಕೋ-ಆಫ್ ಬ್ಯಾಂಕಿನಲ್ಲಿನ ಠೇವು ಸಾಲ ವಿತರಣೆ ಒಟ್ಟು ಎನ್.ಪಿ.ಎ. ನಿವ್ವಳ ಎನ್.ಪಿ.ಎ. ಹಾಗೂ ಲಾಭದ ಆಧಾರದ ಮೇಲೆ ಜಿಲ್ಲಾ ಅತ್ಯುತ್ತಮ ಸಹಕಾರಿ ಬ್ಯಾಂಕಿ ಪ್ರಶಸ್ತಿಗೆ ಪಾತ್ರವಾಗಿವೆ.

ಶೇಡಬಾಳ ಅರ್ಬನ ಬ್ಯಾಂಕಿನ ಈ ವರ್ಷದ ಲಾಭ 75.22 ಲಕ್ಷ ರೂಪಾಯಿ ವಾಗಿದ್ದು ಒಟ್ಟು ಸದಸ್ಯರ ಸಂಖ್ಯೆ 4237 ಇದೆ ಬ್ಯಾಂಕಿನ ಠೇವಣಿ ಹಣ 93.59 ಕೋಟಿ ವಿದೆ ಎಂದು ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಹೆಚ್. ಬಿ ನರಸಗೌಡರು ತಿಳಿಸಿದರು

ಜಿಲ್ಲಾ ಅತ್ಯುತ್ತಮ ಸಹಕಾರಿ ಬ್ಯಾಂಕ ಪ್ರಶಸ್ತಿ ಪಡೆದುಕೊಂಡ ನಂತರ ಬಿಜೆಪಿ ಯುವಮುಖಂಡರಾದ ಶ್ರೀನಿವಾಸ ಪಾಟೀಲ ಬ್ಯಾಂಕಿಗೆ ಆಗಮಿಸಿ ಶೇಡಬಾಳ ಬ್ಯಾಂಕಿನ ನಿರ್ದೇಕರಾದ ಭರತೇಶ ಪಾಟೀಲರನ್ನು ಸತ್ಕರಿಸಿ ಸನ್ಮಾನಿಸಿದರು.
ಸುಕುಮಾರ ಬನ್ನೂರೆ
ಇನ್ ನ್ಯೂಜ್ ಕಾಗವಾಡ

Tags: