Kagawad

ಕಾಗವಾಡ ತಾಲೂಕಿನ ಶೇಡಬಾಳ ಪಟ್ಟಣದಲ್ಲಿ ಸಿದ್ದೇಶ್ವರ ಮಹಾಸ್ವಾಮಿಗಳಿಗೆ ಶ್ರದ್ಧಾಂಜಲಿ ಸಲ್ಲಿಕೆ.

Share

ನಡೆದಾಡುವ ದೇವರು ಸಿದ್ದೇಶ್ವರ ಸ್ವಾಮೀಜಿಗಳ ಅಗಲಿಕೆ ಎಲ್ಲ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ ಶತಮಾನದ ಮಹಾ ಜ್ಞಾನಿಗಳನ್ನು ಕಳೆದುಕೊಂಡಿದ್ದೇವೆ, ಎಂದು ಶೇಡವಾಳದ ಖ್ಯಾತ ವೈದ್ಯರು ಹಾಗೂ ಕೃಷ್ಣ ಶಿಕ್ಷಣ ಸಮಿತಿ ಅಧ್ಯಕ್ಷ ಡಾ. ಅಶೋಕ್ ಪಾಟೀಲ್ ಶ್ರದ್ಧಾಂಜಲಿ ಸಲ್ಲಿಸಿದರು.

ಬುಧವಾರ ರಂದು ಶೇಡಬಾಳದ ಬಸವೇಶ್ವರ ವೃತ್ತದಲ್ಲಿ ಎಲ್ಲ ಸಮಾಜ ಬಾಂಧವರು, ಪಟ್ಟಣ ಪಂಚಾಯತಿ ಸದಸ್ಯರು ಒಂದುಗೂಡಿ ಸಿದ್ದೇಶ್ವರ ಮಹಾಸ್ವಾಮೀಜಿಗಳ ಭಾವಚಿತ್ರಕ್ಕೆ ಪೂಜಿ ಸಲ್ಲಿಸಿ ಶ್ರದ್ಧಾಂಜಲಿ ಸಲ್ಲಿಸಿದರು.

ಡಾಕ್ಟರ್ ಅಶೋಕ್ ಪಾಟೀಲ್ ಮಾತನಾಡಿ ಸಿದ್ದೇಶ್ವರ ಸ್ವಾಮೀಜಿಗಳು ಶೇಡಬಾಳ ಗ್ರಾಮದ ಮೇಲೆ ಅಪಾರ ಶ್ರದ್ಧೆ ಇಟ್ಟಿದ್ದರು. ರಾಷ್ಟ್ರಸಂತ ವಿದ್ಯಾನಂದ ಮುನಿ ಮಹಾರಾಜರ ಜನ್ಮಸ್ಥಾನವಾಗಿದ ಶÉೀಡಬಾಳ ಪಟ್ಟಣದಲ್ಲಿ ಅನೇಕ ಸಭಾ ಸಮಾರಂಭಗಳಲ್ಲಿ ಪಾಲ್ಗೊಂಡು, ತಮ್ಮ ಪ್ರವಚನ ಮುಖಾಂತರ ಇಲ್ಲಿ ಸಮಾಜ ಬಾಂಧವರಿಗೆ ಧರ್ಮ ಪ್ರಭಾವ ಮಾಡಿದ್ದರು. ಸ್ವಾಮೀಜಿಗಳು ಜೈನ ಸಮುದಾಯದ ಅಹಿಂಸಾ ತತ್ವಗಳ ಬಗ್ಗೆ ಅಪಾರಜ್ಞಾನ ಹೊಂದಿದ್ದರು. ಇವರನ್ನು ಕಳೆದುಕೊಂಡು ಎಲ್ಲ ಸಮಾಜ ಬಾಂಧವರು ಒಬ್ಬ ಮಹಾಜ್ಞಾನಿಗಳನ್ನು ಕಳೆದುಕೊಂಡಂತಾಗಿದೆ ಎಂದು ನಮನ ಸಲ್ಲಿಸಿದರು

ಬೆಳಗ್ಗೆಯಿಂದ ಶೇಡಬಾಳ ಪಟ್ಟಣದಲ್ಲಿ ಅಂಗಡಿ ಮುಕ್ಕಟಗಳನ್ನು ಬಂದು ಮಾಡಿ ಶ್ರದ್ಧಾಂಜಲಿ ಸಲ್ಲಿಸಿದರು.
ಶ್ರದ್ಧಾಂಜಲಿ ಸಭೆಯಲ್ಲಿ ಪಟ್ಟಣದ ಹಿರಿಯರಾದ ಜಿನ್ನಪ್ಪಾ ನಾಂದನಿ, ನೇಮಗೌಡ ಘೇನಾಪಗೋಳ, ಅಶ್ವತ್ ಪಾಟೀಲ್, ಪಟ್ಟಣ ಪಂಚಾಯಿತಿ ಸದಸ್ಯರಾದ ಪ್ರಕಾಶ್ ಮಾಳಿ, ಸಚಿನ್ ಜಗತಪ್, ಕಿರಣ ಎಂದಗೌಡರ್, ರಾಜು ಕೂಸನಾಳೆ, ಶಾಂತಿನಾಥ ಮಾಲಗಾಂವೆ, ಬಾಬು ಐನಾಪುರೆ, ನಿಖಿಲ್ ಸಂಗೋರಾಮ, ನಾಮದೇವ್ ಹೊನಕಾಂಬಳೆ, ಕುಮಾರ ಮಾಕನವರ, ರೇಣುಕಾ ಹೊನಕಾಂಬಳೆ, ಸಂತೋμï ಮುಜಾವರ್, ಚೇತನ್ ಮಾಳಿ, ಸೇರಿದಂತೆ ಅನೇಕರು ಇದ್ದರು.

ಶೇಡಬಾಳ ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ಮುಖ್ಯ ಅಧಿಕಾರಿಗಳಾದ ಎಂ. ಎಸ್. ಕೌಲಾಪುರ ಇವರಿಂದ ಸಿದ್ದೇಶ್ವರ ಮಹಾಸ್ವಾಮೀಜಿಗಳ ಪ್ರತಿಮೆಗೆ ಪೂಜೆ ಸಲ್ಲಿಸಿ ಮೌನ ಆಚರಣೆ ಮಾಡಿದರು.
ಈ ವೇಳೆ ಸದಸ್ಯರಾದ ಬಾಬು ಐನಾಪುರೆ, ಪ್ರಕಾಶ್ ಮಾಳಿ, ಸ್ವಾತಿ ಸಚಿನ್ ಜಗತಪ್, ಜ್ಯೋತಿ ಪಾಟೀಲ್, ಅನಿಲ್ ಮಾಲಗಾಂವೆ, ವಿದ್ಯಾ ಮಳೆ, ಮಹಾಧವಲ ಯಾದವಾಡ, ಮಹಾದೇವಿ ಧರಣಗುಪ್ಪೆ, ಬಾಬಾಸಾಹೇಬ್ ಮೇಸ್ತ್ರಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ಸಂಜೆ ಗ್ರಾಮದಲ್ಲಿ ಮೇಣಬತ್ತಿ ಬೆಳಗಿಸಿ ಶ್ರದ್ಧಾಂಜಲಿ ಸಲ್ಲಿಸಿದರು.

ಇದೇ ರೀತಿ ಕಾಗವಾಡ ತಾಲೂಕಿನ ಕಾಗವಾಡ, ಶಿರುಗುಪ್ಪಿ, ಉಗಾರ್, ಜುಗುಳ, ಐನಾಪುರ್, ಮಂಗಸೂಳಿ, ಮೋಳೆ ಗ್ರಾಮಗಳಲ್ಲಿ ಎಲ್ಲ ಗ್ರಾಮ ಪಂಚಾಯಿತಿ, ಬೇರೆ-ಬೇರೆ ಸಂಘ ಸಂಸ್ಥೆಗಳ ವತಿಯಿಂದ ಸಿದ್ದೇಶ್ವರ ಮಹಾ ಸ್ವಾಮೀಜಿಗಳಿಗೆ ಶ್ರದ್ಧಾಂಜಲಿ ಸಲ್ಲಿಸಿದರು.

Tags: