ಸಮಾಜಕ್ಕೆ ಇಂದು ಮಾನಸಿಕ ಪುನರ್ವಸತಿ ಕೇಂದ್ರಗಳ ಅಗತ್ಯವಿದ್ದು, ಎಲ್ಲೆಡೆ ಇಂತಹ ಕೇಂದ್ರಗಳು ಸ್ಥಾಪನೆಯಾಗಬೇಕು ಎಂದು ಬೆಳಗಾವಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಹೇಶ ಕೋಣಿ ಹೇಳಿದರು
ಆದರ್ಶನಗರದಲ್ಲಿ ಸಂಜೀವಿನಿ ಫೌಂಡೇಶನ್‌ನ ಮನೋವೈದ್ಯಕೀಯ ಪುನರ್ವಸತಿ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮಾನಸಿಕ ಅಸ್ವಸ್ಥನಾದರೂ ಬದುಕುವ ಹಕ್ಕಿದೆ ಎಂದ ಅವರು, ಸೂಕ್ತ ಔಷಧೋಪಚಾರ, ಸಲಹೆ ನೀಡಿದರೆ ಅಂತಹ ರೋಗಿಗಳು ಸಮಾಜದಲ್ಲಿ ಬದುಕಬಹುದು.ಎಂದರು
ಈ ಸಂದರ್ಭದಲ್ಲಿ ಸಂಸ್ಥೆಯ ಸಿಇಒ ಮದನ ಬಾಮನೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಹೇಶ ಕೋಣಿ, ತಾಲೂಕಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಮೇಶ ದಂಡಗಿ, ಮನೋವೈದ್ಯಕೀಯ ವಿಭಾಗದ ಮುಖ್ಯಸ್ಥ ಡಾ. ಜಿಲ್ಲಾ ಆಸ್ಪತ್ರೆಯ ಡಾ. ಚಂದ್ರಶೇಖರ್ ಟಿ.ಆರ್., ಸಂಸ್ಥೆಯ ಸಂಸ್ಥಾಪಕಿ ಡಾ. ಸವಿತಾ ದೇಜಿನಾಲ್ ಡಾ.ವಿಜಯಲಕ್ಷ್ಮಿ ಡಾ.ಮಹೇಶ ಕೋಣಿ, ಡಾ.ರಮೇಶ ದಂಡಗಿ, ಡಾ.ಚಂದ್ರಶೇಖರ್ ಮತ್ತು ಡಾ.ವಿಜಯಲಕ್ಷ್ಮಿ ಅವರನ್ನು ಮದನ ಬಾಮನೆ, ಡಾ.ಸವಿತಾ ದೇಜಿನಾಳ್, ಡಾ.ಅನಿಲ್ ಪೋತೆ, ಉಪಸ್ಥಿತರಿದ್ದರು.