ಕೇಲಸದ ಒತ್ತಡಗಳ ನಡುವೆ ಕ್ರೀಡೆಗಳು ಮನೊಲ್ಲಾಸ ನೀಡುತ್ತವೆ ಎಂದು ಹುಕ್ಕೇರಿ ಹಿರಿಯ ದಿವಾಣಿ ನ್ಯಾಯಾಧೀಶ ಕೆ ಎಸ್ ರೋಟ್ಟೆರ ಹೇಳಿದರು .
ಅವರು ಇಂದು ಹುಕ್ಕೇರಿ ನ್ಯಾಯವಾದಿಗಳ ಸಂಘ ಆಯೋಜಿಸಿದ ರಾಜ್ಯದ ವಿವಿಧ ಭಾಗದ ನ್ಯಾಯವಾದಿಗಳ ಬಾರ್ ಅಶೋಸಿಯಶನ್ ಸದಸ್ಯರ ಆಯ್ ಪಿ ಎಲ್ ಕ್ರಿಕೇಟ ಟೋರ್ನಾಮೆಂಟ ದಲ್ಲಿ ಭಾಗವಹಿಸಿ ಮಾದ್ಯಮಗಳೊಂದಿಗೆ ಮಾತನಾಡುತ್ತಾ ವಕೀಲರು ತಮ್ಮ ದಿನ ನಿತ್ಯದ ಕೇಲಸದ ಟ್ರಸ್ ನಿವಾರಿಸಲು ಈ ರೀತಿ ಕ್ರೀಡೆಗಳನ್ನು ಆಯೋಜಿಸುವದು ಅವಶ್ಯಕ ವಾಗಿದೆ ಎಂದರು
ಮೂರು ದಿನಗಳಿಂದ ನಡೆಯುತ್ತಿರುವ ಟೋರ್ನಾಮೆಂಟದಲ್ಲಿ ರಾಜ್ಯದ ವಿಜಯಪೂರ, ದಾವಣಗೇರಿ, ಹಾವೇರಿ, ಧಾರವಾಡ, ರೋಣ, ಗದಗ ಮತ್ತು ಬೆಳಗಾವಿ ಜಿಲ್ಲೆಯ ವಿವಿಧ ತಾಲೂಕಿನ ಬಾರ್ ಅಶೋಸಿಯೆಶನ ಸದಸ್ಯರು ಕ್ರೀಡೆಯಲ್ಲಿ ಭಾಗವಹಿಸಿ ಆಟ ಪ್ರದರ್ಶಿಸಿದರು.
ಹಿರಿಯ ನ್ಯಾಯವಾದಿ ಪಿ ಆರ್ ಚೌಗಲಾ ಮಾತನಾಡಿ ಸುಂದರವಾದ ಕ್ರೀಡಾಂಗಣದಲ್ಲಿ ಪ್ರಥಮ ಬಾರಿಗೆ ಆಯೋಜಿಸಿದ ಕ್ರೀಕೇಟ ಟೋರ್ನಾಮೆಂಟಕ್ಕೆ ಒಳ್ಳೆಯ ಪ್ರತಿಕ್ರೀಯೆ ಬಂದಿದೆ ಬರುವ ಡಿಸೆಂಬರ ತಿಂಗಳಿನಲ್ಲಿ ಮತ್ತೆ ಆಯೋಜನೆ ಮಾಡಿ ಪ್ರಥಮ ಬಹುಮಾನ 51 ಸಾವಿರ ರೂಪಾಯಿ ನಾನೆ ನಿಡುತ್ತೆನೆ ಎಂದು ಘೋಷಣೆ ಮಾಡಿದರು
ಹುಕ್ಕೇರಿ ನ್ಯಾಯವಾದಿಗಳ ಸಂಘದ ಅದ್ಯಕ್ಷ ಹಾಗೂ ಆಯ್ ಪಿ ಎಲ್ ರೂವಾರಿ ರಾಜೀವ ಚೌಗಲಾ ಮಾತನಾಡಿ ಎಲ್ಲಾ ವಕೀಲರ ಸಹಕಾರ ಮತ್ತು ಮಾರ್ಗದರ್ಶನದಲ್ಲಿ ಕ್ರಿಕೇಟ ಟೊರ್ನಾಮೆಂಟ ಯಶಸ್ವಿಯಾಗಿ ಜರುಗಿಸಲಾಗಿದೆ , ಕ್ರೀಡಾ ಪಟುಗಳಿಗೆ ಎಲ್ಲ ರೀತಿಯ ವ್ಯವಸ್ಥೆಯನ್ನು ಅಚ್ಚು ಕಟ್ಟಾಗಿ ಮಾಡಲಾಗಿದೆ ಹಾಗೂ ವಿಜೇತ ತಂಡಗಳಿಗೆ ಪಾರಿತೋಷಕ ದೊಂದಿಗೆ ಆಕರ್ಷಕ ನಗದು ಹಣ ನೀಡಲಾಗಿದೆ ಎಂದರು
ವಿವಿಧ ಭಾಗಗಳಿಂದ ಆಗಮಿಸುದ ಕ್ರೀಡಾ ಪಟುಗಳು ಹುಕ್ಕೇರಿ ವಕೀಲರು ಆಯೋಜಿಸದ ಟೊರ್ನಾಮೆಂಟ ದಲ್ಲಿ ಆಡುವ ಕ್ರೀಡಾ ಪಟುಗಳಿಗೆ ಎಲ್ಲ ರೀತಿಯ ವ್ಯವಸ್ಥೆಮಾಡುವ ಮೂಲಕ ಮಾದರಿ ಯಾಗಿದ್ದಾರೆ ಎಂದರು
ಫೈನಲ್ ಆಟದಲ್ಲಿ ಪ್ರಥಮ ಸ್ಥಾನ ಪಡೆದ ವಿಯಪೂರ, ದ್ವೀತಿಯ ಸ್ಥಾನ ಅಥಣಿ ಮತ್ತು ಮೂರನೆ ಸ್ಥಾನ ಪಡೆದ ಮೂಡಲಗಿ ಹಾಗೂ ಬೆಳಗಾವಿ ತಂಡಗಳಿಗೆ ಬಹುಮಾನ ವೀತರಿಸಲಾಯಿತು.
ಈ ಸಂದರ್ಭದಲ್ಲಿ ಕೀರಿಯ ನ್ಯಾಯಾದೀಶ ಕೆ ಅಂಬಣ್ಣಾ, ನ್ಯಾಯವಾದಿಗಳಾದ ಕೆ ಎಲ್ ಜಿನರಾಳಿ, ಡಿ ಕೆ ಅವರಗೋಳ, ಬಿ ಎಮ್ ಜಿನರಾಳೆ, ಉಮೇಶ ಪಾಟೀಲ, ಎಸ್ ಎನ್ ಮಗದುಮ್ಮ, ಬಿ ಎಮ್ ಪಾಟೀಲ, ಎ ಬಿ ತೋದಲ, ಅನೀಸ ವಂಟಮೂರಿ, ಡಿ ಎ ಮಂಗಸೂಳಿ, ಮಹಾಂತೇಶ ಬೋರಗಲಿ, ಪವನ ಮನಗೂಳಿ, ಬಿ ಬಿ ಪಾಸಪ್ಪಗೋಳ ಮತ್ತು ಹುಕ್ಕೇರಿ ನ್ಯಾಯವಾದಿಗಳ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.