Uncategorized

ನಾಡದೇವತೆ ಚಾಮುಂಡೇಶ್ವರಿಗೆ ಕೊಡುಗಿ‌ನ ತಲಕಾವೇರಿಯ ಉಗಮ ಸ್ಥಾನಕ್ಕೆ ಪೂಜೆ ಸಲ್ಲಿಸಲಿರುವ ಹುಕ್ಕೇರಿ ಶ್ರೀ ಮಂಡ್ಯದ ಶ್ರೀ

Share

ಬೆಳಗಾವಿ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹಾಗೂ ಮಂಡ್ಯ ಜಿಲ್ಲೆಯ ಬೇಬಿ ಗ್ರಾಮ ಶ್ರೀರಂಗಪಟ್ಟಣದ ಚಂದ್ರವನ ಆಶ್ರಮದ ಶ್ರೀ. ಡಾ. ತ್ರಿ ನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ ಕರ್ನಾಟಕ ರಾಜ್ಯೋತ್ಸವದ ನಿಮಿತ್ತ ನಾಡದೇವತೆ ಚಾಮುಂಡೇಶ್ವರಿ ದೇವತಿಗೆ ಕೊಡುಗಿ‌ನ ತಲಕಾವೇರಿಯ ಉಗಮ ಸ್ಥಾನಕ್ಕೆ ಪೂಜೆ ಸಲ್ಲಿಸಲಿದ್ದಾರೆ.

ಕರ್ನಾಟಕ ಎಂದು ನಾಮಕರಣ ಮಾಡಿ 50 ವರ್ಷಗಳು ಕಳೆದಿವೆ. ಸುವರ್ಣ ಕರ್ನಾಟಕದ ಹಬ್ಬವನ್ನು ಎಲ್ಲ ಕನ್ನಡಿಗರು ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ನಾಡದೇವತೆ ಚಾಮುಂಡೇಶ್ವರಿ ದೇವಿಗೆ ಮಂಗಳವಾರ ಸಂಜೆ 7ಕ್ಕೆ ವಿಶೇಷವಾದ ಪೂಜೆ ಮತ್ತು ಆರತಿ ಬೆಳಗುವುದರ ಜೊತೆಗೆ ನವೆಂಬರ್ 1 ರಂದು ಬೆಳಗ್ಗೆ 6 ರಿಂದ 8 ಗಂಟೆಯವರೆಗೆ ಕೊಡಗಿನ ಕಾವೇರಿ ಉಗಮ ಸ್ಥಾನಕ್ಕೆ ವಿಶೇಷವಾದ ಪೂಜೆ ಸಲ್ಲಿಸಿ ಶ್ರೀಗಳಿಬ್ಬರೂ ಪ್ರಾರ್ಥಿಸಲಿದ್ದಾರೆ. ಕರುನಾಡಿನ ಜನರಿಗೆ ಒಳಿತಾಗಲಿ, ಕನ್ನಡವನ್ನು ಉಳಿಸಿ, ಬೆಳೆಸುವ ಪ್ರವೃತಿ ಬರಲಿ.‌ ಎಲ್ಲರೂ ಒಂದಾಗಿ ಕನ್ನಡವನ್ನು ಉಳಿಸಲಿ ಎನ್ನುವ ಉದ್ದೇಶದಿಂದ ಶ್ರೀಗಳು ಪೂಜೆ ಸಲ್ಲಿಸುತ್ತಿದ್ದಾರೆ. ಕಾವಿಧಾರಿಗಳ ಕಾಳಜಿಯನ್ನು ನಾವೆಲ್ಲ ಮೆಚ್ಚಲೆಬೇಕು.
ಇದೇ ಸಂದರ್ಭದಲ್ಲಿ ಖ್ಯಾತ ವಾಸ್ತು ತಜ್ಞ ಬಳ್ಳಾರಿಯ ಶ್ರೀಧರ ಪರಿಮಳ ಆಚಾರ್ಯರು ಉಪಸ್ಥಿತರಿದ್ದರು. ಉತ್ತರ ಹಾಗೂ ದಕ್ಷಿಣ ಕರ್ನಾಟಕದ ಜನರು ಇದರಲ್ಲಿ ಭಾಗಿಯಾಗಲಿದ್ದಾರೆ.

Tags: