ಬೆಳಗಾವಿ ನಗರದ ಲಕ್ಷ್ಮಿ ಟೆಕಡಿಯಲ್ಲಿರುವ ಹುಕ್ಕೇರಿ ಹಿರೇಮಠದಲ್ಲಿ ಶ್ರೀರಾಮ ಮಂತ್ರಾಕ್ಷತೆ ಕಲಶ ಪೂಜೆಯನ್ನ ಶ್ರೀ ಷ ಬ್ರ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳವರು ತಮ್ಮ ಗುರುಕುಲದ ವೇದವಿದ್ವಾಂಸರೊಂದಿಗೆ ನೆರವೇರಿಸಿ ಆರತಿ ಮಾಡಿದರು.
ಅಯೋದ್ಯೆ ಶ್ರೀರಾಮ ಮಂದಿರದ ನಿರ್ಮಾಣಕ್ಕಾಗಿ ಸಾರ್ವಜನಿಕರಿಗೆ ಮಂತ್ರಾಕ್ಷತೆ ಕಲಶ ಪೂಜೆ ವಿನಾಯಕ ನಗರದಲ್ಲಿ ಇವತ್ತು ಸಂಚರಿಸುತ್ತಿದೆ ಪ್ರಾರಂಭದಲ್ಲಿ ಹುಕ್ಕೇರಿ ಹಿರೇಮಠದಲ್ಲಿ ಅತಿ ಭಕ್ತಿಭಾವದಿಂದ ಪೂಜೆ ನೆರವೇರಿತು
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಗಳು ಭಾರತೀಯರ ಬಹುದಿನದ ಕನಸು ಇವತ್ತು ನನಸಾಗುತ್ತಿದೆ ಶ್ರೀರಾಮ ಮಂದಿರ ನಿರ್ಮಾಣಗೊಂಡು ರಾಮನ ಭಕ್ತರಿಗೆ ಅತೀವ ಸಂತಸ ತರುವ ದಿನ ಜನವರಿ ೨೨ ಇವತ್ತು ಶ್ರೀಮಠಕ್ಕೆ ಮಂತ್ರಾಕ್ಷತೆ ಕಲಶ ಆಗಮಿಸಿ ಪೂಜೆಗೊಂಡಿದೆ ,ಎಲ್ಲರು ಅಯೋದ್ಯೆಗೆ ಹೋಗಿ ರಾಮನ ದರ್ಶನವನ್ನ ಪಡೆಯಿರಿ ಎಂದರು .
ಈ ಸಂದರ್ಭದಲ್ಲಿ ನಿಶಾಂತ ಸ್ವಾಮಿ . ಮಹಾಂತೇಶ ಶಾಸ್ತ್ರೀ ,ಉದಯಕುಮಾರ ಶಾಸ್ತ್ರೀ ಹಾಗು ಸಿದ್ದು ಶಾಸ್ತ್ರೀ ಸೇರಿದಂತೆ ಸುಮಾರು ೨೧ ವೇದಪಂಡಿತರು ಪೂಜೆಯನ್ನ ನೆರವೇರಿಸಿದರು . ವಿನಾಯಕ ನಗರದ ಹಿರಿಯರಾದ ಸುನಿಲ ದೇಶಪಾಂಡೆ ,ವಿಲಾಸ ಪೈ ,ರಾಜು ಸೋಜಿಕರ ,ಅರವಿಂದರಾವ್ ಕುಲಕರ್ಣಿ ಈಶ್ವರ ದಳವಿ,ನಿಖಿಲ ಮಟ್ಟಿ , ಬಸವರಾಜ ಸವದಿ ಸೇರಿದಂತೆ ಅನೇಕ ಗಣ್ಯಮಾನ್ಯರು ಉಪಸ್ಥಿತರಿದ್ದರು .