ಶಿವಮೊಗ್ಗ: ರಾಗಿಗುಡ್ಡ ಗಲಭೆ (Ragigudda) ಪ್ರಕರಣದಲ್ಲಿ ಕಿಡಿಗೇಡಿಗಳು ತಮಗೆ ಪಾಠ ಕಲಿಸಿದ ಶಿಕ್ಷಕಿ (Teacher) ಮನೆ ಮೇಲೆಯೇ ಕಲ್ಲು ತೂರಾಟ (Stone Pelting) ನಡೆಸಿ ಗಾಜುಗಳನ್ನು ಪುಡಿ ಪುಡಿ ಮಾಡಿದ್ದಾರೆ. ಗಲಾಟೆ ನಡೆದ ಸಂದರ್ಭದಲ್ಲಿ ಶಿಕ್ಷಕಿ ಕುಟುಂಬ ಮನೆಯಲ್ಲಿರದ ಕಾರಣ ಯಾವುದೇ ಅಪಾಯವಾಗಿಲ್ಲ. ಶಿಕ್ಷಕಿ ಸುಶೀಲಾ ಬಾಯಿ ಅವರು ರಾಗಿಗುಡ್ಡದ ಉರ್ದು ಶಾಲೆಯಲ್ಲಿ ಕನ್ನಡ ಶಿಕ್ಷಕಿಯಾಗಿ (Kannda Teacher) ಸೇವೆ ಸಲ್ಲಿಸಿ ನಿವೃತ್ತಿಯಾಗಿದ್ದಾರೆ. ಸುಮಾರು 12ಕ್ಕೂ ಹೆಚ್ಚು ವಿದ್ಯಾರ್ಥಿಗಳಿಂದ ಮನೆ ಮೇಲೆ ದಾಳಿ ನಡೆಸಿದ್ದಾರೆ. ನಾನು ಪಾಠ ಕಲಿಸಿದ ವಿದ್ಯಾರ್ಥಿಗಳೇ (Students) ಮನೆಯನ್ನು ಹಾಳು ಮಾಡಿದ್ರು ಎಂದು ಶಿಕ್ಷಕಿ ಸುಶೀಲಾ ಬಾಯಿ ಕಣ್ಣೀರು ಹಾಕಿದ್ದಾರೆ.
ಮನೆಯ ಮುಂಭಾಗದ ಕಿಟಕಿಯ ಗಾಜುಗಳನ್ನು ಒಡೆದಿದ್ದಾರೆ. ಒಂದು ಮೂಟೆಯಷ್ಟು ಗಾಜುಗಳನ್ನು ತುಂಬಿಟ್ಟಿದ್ದೇನೆ. ಸಾತ್ವಿಕತೆಯಿಂದ ಬದುಕಿದರೇ ದೇಶವೇ ಉದ್ಧಾರವಾಗುತ್ತದೆ ಎಂದು ಹೇಳಿದರು.
ಮಾತನಾಡಿದ ಸುಶೀಲಾ ಬಾಯಿ, ನಾನೇ ಉರ್ದು ಕಲಿತು ಕನ್ನಡ ಬೋಧಿಸಲು ಪ್ರಯತ್ನ ಮಾಡಿದ್ದೇನೆ. ನನ್ನ ಹತ್ರ ಓದಿದ ಎಷ್ಟೋ ಮಕ್ಕಳು ಕನ್ನಡದಲ್ಲಿ ಪದವಿ ಪಡೆದುಕೊಂಡು ಕೆಲಸ ಮಾಡುತ್ತಿದ್ದಾರೆ. ಆದರೆ ಹೀಗೆ ಆಗುತ್ತೆ ಅಂತ ಗೊತ್ತಿರಲಿಲ್ಲ ಎಂದು ಭಾವುಕರಾದರು.
ಮೂರ್ನಾಲ್ಕು ಜನರು ಗುರುತು ಸಿಕ್ಕಿದೆ
ಮನೆ ಮೇಲೆ ಕಲ್ಲು ಎಸೆದಿರೋ ಫೋಟೋಗಳು ಅಸ್ಪಷ್ಟವಾಗಿದ್ದು, ಮಕ್ಕಳು ದೊಡ್ಡವರಾಗಿದ್ದು ಗುರುತು ಸಿಗಲ್ಲ. ಫೋಟೋದಲ್ಲಿಯ ಮೂರ್ನಾಲ್ಕು ಜನರ ಗುರುತು ಸಿಕ್ಕಿದೆ. ಗಲಾಟೆಯಲ್ಲಿದ್ದ ಶೇ.75ರಷ್ಟು ಹುಡುಗರು ನನ್ನ ವಿದ್ಯಾರ್ಥಿಗಳು ಎಂದು ಬೇಸರ ಹೊರ ಹಾಕಿದರು.