Uncategorized

ಮಹಾಲಕ್ಷ್ಮೀ ದೇವಸ್ಥಾನದಲ್ಲಿ 13ನೇ ದಸರಾ ನಿಮಿತ್ಯ ಲಕ್ಷ್ಮೀ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ ಸುಮಂಗಲೆಯರು

Share
ಬಾಕ್ಸೈಟ್ ರಸ್ತೆಯ ಪಕ್ಕದಲ್ಲಿರುವ ಮಹಾಲಕ್ಷ್ಮೀ ದೇವಸ್ಥಾನದಲ್ಲಿ 13ನೇ ದಸರಾ ಹಾಗೂ ನವರಾತ್ರಿ ಮಹೋತ್ಸವದ ಅಂಗವಾಗಿ ಮಂಗಳವಾರ ಬೆಳಗ್ಗೆ ಸುಮಂಗಲೆಯರು ಲಕ್ಷ್ಮೀ ದೇವಿಗೆ ವಿಶೇಷ ಪೂಜೆ, ಮಂಗಳರಾತಿ, ಹೋಮ ಹವನ ಹಾಗೂ ಬನ್ನಿ ಗಿಡಕ್ಕೆ ಪೂಜೆ ಸಲ್ಲಿಸಿದರು.
ಬೆಳಗ್ಗೆಯಿಂದ ಲಕ್ಷ್ಮೀ ದೇವಸ್ಥಾನಕ್ಕೆ ಮಂಗಳಾರತಿ ಸಮೇತ ಆಗಮಿಸಿದ ಸುಮಂಗಲೆಯರು ದೇವಿಯ ಪಾರಾಯಾಣದಲ್ಲಿ ಭಾಗಿಯಾಗಿ ವಿಶೇಷ ಮಂಗಳರಾತಿ ಮಾಡಿ ದರ್ಶನ ಪಡೆದರು. ದೇವಸ್ಥಾನದ ಆವರಣದಲ್ಲಿ ಆಕರ್ಷಕ ರಂಗೋಲಿಯ ಮುಂಭಾಗದಲ್ಲಿ ಪ್ರತಿಷ್ಠಾಪನೆ ಮಾಡಲಾದ ದೇವಿಯ ವಿಗ್ರಹಗಳಿಗೆ ಅಲಂಕಾರ ಮಾಡಿದ್ದರು. ನವರಾತ್ರಿಯ ಅಂಗವಾಗಿ ಪ್ರತಿನಿತ್ಯ ಹೋಮ, ಹವನ ವಿಶೇಷ ಪೂಜೆಯನ್ನು ದೇವಿಗೆ ಸಲ್ಲಿಸಿದರು. ಮಧ್ಯಾಹ್ನ 3.30ಕ್ಕೆ ನಿತ್ಯ ನಡೆಯುವ ಚಂಡಿಕಾ ಹೋಮದಲ್ಲಿ ಭಾಗಿಯಾದರು. ಈ ಸಂದರ್ಭದಲ್ಲಿ ಮಾತನಾಡಿದ ಮಹಾಲಕ್ಷ್ಮೀ ದೇವಸ್ಥಾನದ ಕಮಿಟಿಯ ಟ್ರಸ್ಟಿ ಸತೀಶ್ ಮಾಳವಾದೆ ಮಾತನಾಡಿ, ಉಷಾ ಕಾಲೋನಿಯಲ್ಲಿ ಕಳೆದ 13 ವರ್ಷಗಳ ಹಿಂದಿನಿಂದಲೂ ಸುಮಂಲೆಯರು ಇಲ್ಲಿಗೆ ಪ್ರತಿ ವರ್ಷ ನವರಾತ್ರಿಯಂದು ವಿಶೇಷ ಪೂಜೆ ಸಲ್ಲಿಸುತ್ತಾರೆ. ಪಂಚಪೀಠಾಧೀಶ್ವರರಿಂದ ಲೋಕಾರ್ಪಣೆಗೊಂಡ ಈ ದೇವಸ್ಥಾನದಲ್ಲಿ ದಸರಾ ಮಹೋತ್ಸವದ ಅಂಗವಾಗಿ ನವರಾತ್ರಿಯಂದು ಒಂಬತ್ತು ದಿನಗಳ ಕಾಲ ವಿಶೇಷ ಪೂಜೆ,ದ್ವೀಪ ಪ್ರಜ್ವಲನೆಯೊಂದಿಗೆ ಘಟಸ್ಥಾಪನೆ, ಗಣಹೋಮ, ಚಂಡಿಕಾ ಹೋಮ, ಕುಂಕುಮಾರ್ಚನೆ ಸೇರಿದಂತೆ ವಿವಿಧ ಪೂಜೆಗಳನ್ನು ದೇವಿಗೆ ಭಕ್ತರು ಸಲ್ಲಿಸುತ್ತ ಬಂದಿದ್ದಾರೆ ಎಂದರು.
ಅ.23 ರಂದು ನಡೆಯಲಿರುವ ಚಂಡಿಕಾ ಹೋಮದ ಪೂರ್ಣಾಹುತಿಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭಾಗವಹಿಸಿ ಮಹಾಲಕ್ಷ್ಮೀ ದೇವಿಯ ಭಕ್ತರಿಗೆ ಸನ್ಮಾನ ಮಾಡಲಿದ್ದಾರೆ ಎಂದರು.
Type a message

Tags: