ಧಾರ್ಮಿಕ ಕಾರ್ಯಕ್ರಮಗಳಲ್ಲಿ ಅನ್ನ ಸಂತರ್ಪಣೆ ಸರ್ವೆ ಸಾಮಾನ್ಯ. ಮಸಾಲೆ ಅನ್ನ, ಶೀರಾ ಅಥವಾ ಹುಗ್ಗಿ ಕೊಡೊದು ವಾಡಿಕೆ. ಆದ್ರೆ ಮಸಾಲೆ ಅನ್ನದ ಜೊತೆಯಲ್ಲಿ ಶೇಂಗಾ ಹೋಳಿಗೆ ಯನ್ನು ಪ್ರಸಾದದ ರೂಪದಲ್ಲಿ ವಿತರಿಸಲಾಗಿದೆ. ಅಲ್ಲದೇ ಮಹಿಳೆಯರಿಗೆ ಸೌಭಾಗ್ಯ ಭಾಗ್ಯ ಗಟ್ಟಿಯಾಗಿರಲೆಂದು ಉಡಿ ತುಂಬುವ ಕಾರ್ಯಕ್ರಮವೊಂದು ನಡೆದಿದೆ. ಈ ಕುರಿತು ಇಲ್ಲಿದೆ ಡಿಟೇಲ್ಸ್…
ದಾರ್ಮಿಕ ಕಾರ್ಯಕ್ರಮಗಳಲ್ಲಿ ಅನ್ನ ಸಂತರ್ಪಣೆ ಮಾಡಿದರೆ ಅನ್ನಪೂರ್ಣೇಶ್ವರಿ ದೇವಿಯು ಸದಾಕಾಲ ಭಕ್ತರನ್ನು ಹರಸಿ ಸನ್ಮಂಗಳವನ್ನುಂಟು ಮಾಡುತ್ತಾಳೆ ಎಂಬುದು ನಂಬಿಕೆ. ಹೀಗೆ ಅನ್ನ ಸಂತರ್ಪಣೆಯಲ್ಲಿ ಮಸಾಲಾ ಅನ್ನ, ಸಿಹಿಯಲ್ಲಿ ಶಿರಾ ಅಥವಾ ಹುಗ್ಗಿ ಮಾಡಿಸೋದು ಸಾಮಾನ್ಯ. ಆದ್ರೆ ನವರಾತ್ರಿ ಹಿನ್ನೆಲೆಯಲ್ಲಿ ವಿಜಯಪುರ ನಗರದ ಗಚ್ಚಿನಕಟ್ಟಿ ಕಾಲೋನಿಯ ಶ್ರೀ ಅಂಬಾಭವಾನಿ ತರುಣ ಮಂಡಳದ ವತಿಯಿಂದ ಈ ಬಾರಿ ಭಕ್ತರಿಗೆ ಪ್ರಸಾದದ ರೂಪದಲ್ಲಿ ಬರೊಬ್ಬರಿ 15 ಸಾವಿರ ಕ್ಕೂ ಹೆಚ್ಚು ಶೇಂಗಾ ಹೋಳಿಗೆ ವಿತರಿಸ ಲಾಯಿತು.ಶೇಂಗಾ ಹೋಳಿಗೆ ಸವಿದು ಭಕ್ತರು ಹರ್ಷ ಪಟ್ಟರು. ಇನ್ನೂ ಈ ಕಾಲೋನಿಯಲ್ಲಿ ಸದಾ ಜಾಗೃತವಾಗಿರೋ ಜಗನ್ಮಾತೆ ಅಂಬಾಭವಾನಿ ದೇವಸ್ಥಾನ ಇದೆ. ಇಲ್ಲಿ ಜಗನ್ಮಾತೆ ಭಕ್ತರ ಆಶೋತ್ತರಗಳನ್ನು ಈಡೇರಿಸೊ ಮೂಲಕ ನೊಂದವರ ಬಾಳಿಗೆ ಬೆಳಕಾಗಿ ನಿಲ್ಲುತ್ತಿದ್ದಾಳೆ. ಹೀಗಾಗಿ ಇಲ್ಲಿ ಭಕ್ತ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಪ್ರತಿ ವರ್ಷ ನವರಾತ್ರಿ ಹಬ್ಬದಲ್ಲಿ ಪುರಾಣ ಸೇರಿದಂತೆ ಹಲವು ಧಾರ್ಮಿಕ ಕಾರ್ಯಕ್ರಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುತ್ತದೆ.
ಅತ್ತ ಅನ್ನಸಂತರ್ಪಣೆ ನಡೆಯುತ್ತಿದ್ದರೆ ಇತ್ತ 5 ಸಾವಿರ ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಯಿತು. ಅರಿಷಿಣ, ಕುಂಕುಮ, ಬಳೆ, ಬಾಳೆಹಣ್ಣು, ಖಣ ನೀಡಿ ಹೆತ್ತ ಮನೆಗೂ ಗೌರವ ಕೊಟ್ಟ ಮನೆಗೆ ಕೀರ್ತಿ ತಾರಮ್ಮ ಎಂದು ಹರಸಲಾಯಿತು. ನಗರದ ಗಣ್ಯ ವರ್ತಕ ಸುರೇಶ ಗಚ್ಚಿನಕಟ್ಟಿ ಇವರ ಅಧ್ಯಕ್ಷತೆಯಲ್ಲಿ ಹಾಗೂ ಮಲ್ಲಿಕಾರ್ಜುನ ಗಂಗನಳ್ಳಿ ಸಂಚಾಲಕರಾಗಿರುವ ತರುಣ ಮಂಡಳಿಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
ನವರಾತ್ರಿಯನ್ನು ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಮೊಬೈಲ್ ಸಿರಿಯಲ್ ಬಿಟ್ಟು ಮಹಿಳೆಯರು ದಾಂಡಿಯಾ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ನಮ್ಮ ದೇಸಿ ಸಂಸ್ಕೃತಿ ಪಾಲಿಸುತ್ತಿದ್ದಾರೆ.
ವಿಜಯಕುಮಾರ ಸಾರವಾಡ
ಇನ್ ನ್ಯೂಜ್,
ವಿಜಯಪುರ…