ಪಿಸಿಪಿಎನ್‌ಡಿಟಿ & ಕೆಪಿಎಂಇ ಕಾಯ್ದೆ ನಿಯಮ ಉಲ್ಲಂಘನೆ ಮಾಡಿದ ಯರಗಟ್ಟಿಯ ಶ್ರೀ ಸಾಯಿರಾಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆನ್ನು ಪಿಸಿಪಿಎನ್‌ಡಿಟಿ & ಕೆಪಿಎಂಇ ಕಾಯ್ದೆಯಡಿ ವಶಪಡಿಸಿಕೊಳ್ಳಲಾಗಿದೆ
ಕೆಪಿಎಂಇ ಕಾಯ್ದೆ ಅಡಿ ಪಾಲಿಕ್ಲಿನಿಕ್ ಪರವಾನಿಗೆ ತೆಗೆದುಕೊಂಡು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಡೆಸುತ್ತಿರುವ ಶ್ರೀ ಸಾಯಿರಾಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ದಾಖಲೆ ಸರಿಯಾಗಿ ನಿರ್ವಹಿಸಿಲ್ಲ ಮತ್ತು ಬೇರೆ ವೈದರಿಂದ ಸ್ಕಾನಿಂಗ್ ಮಾಡಿಸುವುದು ರೆಫರಲ್ ಸ್ಲಿಪ್ ದಾಖಲಾತಿಗಳನ್ನ ಸರಿಯಾಗಿ ಸಂಗ್ರಹಿಸದೇ ಕಾರಣ ಬೈಲಹೊಂಗಲದ ಉಪವಿಭಾಗಾಧಿಕಾರಿ ,ಉಪವಿಭಾಗದ ದಂಡಾಧಿಕಾರಿ ಪ್ರಭಾವತಿ ಎಫ್ . ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಹಾಗು ಪಿಸಿಪಿಎನ್‌ಡಿಟಿ & ಕೆಪಿಎಂಇ ನೂಡಲ್ ಅಧಿಕಾರಿ ಡಾ.ವಿಶ್ವನಾಥ ಭೋವಿ. ಟಿಎಚ್ಒ ಸವದತ್ತಿ ಡಾ.ಶ್ರೀಪಾದ್ ಸಭನಿಸ, ಆರೋಗ್ಯ ನಿರಕ್ಷಣಾ ಅಧಿಕಾರಿ ಮಂಜುನಾಥ್ ಬಿಸನಳ್ಳಿ ತಂಡ ದಾಳಿ ಮಾಡಿದೆ .
ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಬಾಗಿಯಾಗಿದ್ದರು .