ಬೆಳಗಾವಿಯ ಪಾಂಗುಳ್ಳ ಗಲ್ಲಿಯ ಶ್ರೀ ಚಂದ್ರಪ್ರಭಾ ಜೈನ ಶ್ವೇತಾಂಬರ ಮೂರ್ತಿಪೂಜಕ ಸಂಘವು ಸರ್ವಧರ್ಮಗಳ ನಡುವೆ ಏಕತೆ ಮತ್ತು ಸೌಹಾರ್ದತೆಯನ್ನು ಬೆಳೆಸುವ ನಿಟ್ಟಿನಲ್ಲಿ ಇಂದು ‘ಮೈತ್ರಿ’ ಮಹಾಪ್ರಸಾದವನ್ನು ಆಯೋಜಿಸಿತ್ತು. ಉದ್ಘಾಟನೆ ಮಾಡಿ ಮಾತನಾಡಿದ ಸಂಸದೆ ಮಂಗಲಾ ಅಂಗಡಿ ಬೆಳಗಾವಿಯಲ್ಲಿ ಶ್ರೀ ಚಂದ್ರಪ್ರಭ ಜೈನ ಶ್ವೇತಾಂಬರ ಮೂರ್ತಿ ಪೂಜಾಕ ಸಂಘದಿಂದ ಅನೇಕ ಸಾಮಾಜಿಕ ಕಾರ್ಯಗಳು ನಡೆಯುತ್ತಿವೆ. ಶ್ವೇತಾಂಬರ ಜೈನ ಸಮಾಜ ಸಮಾಜಕ್ಕೆ ಮಹತ್ತರ ಕೊಡುಗೆ ನೀಡಿದೆ. ಅನ್ನದಾನ ಮಹಾದಾನವಾಗಿದೆ ಈ ಮಹತ್ಕಾರ್ಯವನ್ನು ಈ ಸಮಾಜ ಮಹಾಪ್ರಸಾದ ಮೂಲಕ ಮಾಡಿದೆ. ಅವರ ಎಲ್ಲಾ ಕೆಲಸಗಳಿಗೆ ನಾನು ಶುಭ ಹಾರೈಸುತ್ತೇನೆ ಎಂದರು.
ಸಭೆಯನ್ನುದ್ದೇಶಿಸಿ ಮಾತನಾಡಿದ ಸಾಧ್ವಿ ವಿರೇಶಬಾಲಾ, ಪ್ರತಿಯೊಂದು ಜೀವಿಯ ಬಗ್ಗೆ ಸ್ನೇಹ, ಪ್ರೀತಿ, ಆತ್ಮೀಯತೆಯ ಭಾವನೆ ಇಲ್ಲದಿದ್ದರೆ ಮಾನವನಿಗೆ ಮುಕ್ತಿ ಸಿಗುವುದಿಲ್ಲ. ಆದ್ದರಿಂದ ಎಲ್ಲರೂ ಪರಸ್ಪರ ಪ್ರೀತಿ, ಸೌಹಾರ್ದದಿಂದ ನಡೆದುಕೊಳ್ಳಬೇಕು ಎಂದರು.
ಘೇವರ್‌ಚಂದ್ ಪೋರ್ವಾಲ್ ಮತ್ತು ಸುಮುಖ್‌ಬೆನ್ ಪೋರ್ವಾಲ್ ಅವರು ಕಾರ್ಯಕ್ರಮದ ಆರಂಭದಲ್ಲಿ. ಸಂಸದೆ ಮಂಗಲಾ ಅಂಗಡಿ ಅವರನ್ನು ಶಾಲು ಹೊದಿಸಿ, ಹಾರ ಹಾಕಿ ಸನ್ಮಾನಿಸಿದರು ಸಂಸದೆ ಮಂಗಲಾ ಅಂಗಡಿ ಯವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಉತ್ತಮ ಪೋರವಾಲ್, ವಿಜಯ್ ಪೋರವಾಲ್, ಪೋಪಟ್ಲಾಲ್ ಪೋರವಾಲ್, ರಾಜಕುಮಾರ ಖೋಡಾ, ರಾಜೇಂದ್ರ ದುಮಾವತ್, ಭರತ್ ಪೋರವಾಲ್, ಮಹೇಶ್ ಪೋರವಾಲ್, ಡೈಮಂಡ್ ಜೋಶಿ ಮತ್ತಿತರರು ಉಪಸ್ಥಿತರಿದ್ದರು. ಸುಮಾರು 5,000 ಜನಾ ಈ ‘ಮೈತ್ರಿ’ ಮಹಾಪ್ರಸಾದದಲ್ಲಿ ಭಾಗಿಯಾಗಿದ್ದರು