Uncategorized

ಡಿ.04 ರಂದು ಮಹಾ ಮೇಳಾವ್ ನಡೆಸಲು ಎಂಇಎಸ್ ನಾಯಕರ ತೀರ್ಮಾನ

Share

ಡಿ.04 ರಂದು ಬೆಳಗಾವಿಯಲ್ಲಿ ಅಧಿವೇಶನ ಹಿನ್ನೆಲೆ ಎಂಇಎಸ್ ಯುವ ಸಂಘಟನೆಯಿಂದ ಸಭೆ ನಡೆಸಲಾಯಿತು

ಡಿಸೆಂಬರ್ 04 ರಂದು ಬೆಳಗಾವಿಯ ಅಧಿವೇಶನ ಹಿನ್ನೆಲೆ ಇಂದು ನಗರದ ಎಂಇಎಸ್ ಕಚೇರಿಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿಯ ಯುವ ಅಧ್ಯಕ್ಷ ಅಂಕುಶ ಕೇಸರಕರ ನೇತೃತ್ವದಲ್ಲಿ ಸಭೆ ನಡೆಸಲಾಯಿತು.ಡಿ.04 ರಂದು ಮಹಾರಾಷ್ಟ್ರ ಏಕೀಕರಣ ಸಮಿತಿಯಿಂದ ಮಹಾ ಮೇಳಾವನ್ನು ನಡೆಸಲು ನಿರ್ಧರಿಸಲಾಯಿತು , ಹೆಚ್ಚಿನ ಭಾಷೆಯಲ್ಲಿ ಮರಾಠಿಗರು ಪಾಲ್ಗೋಂಡು ಮಹಾ ಮೇಳಾವನ್ನು ಯಶ್ವಸಿಗೊಳಿಸಬೇಕೆಂದು ಕೊರಲಾಯಿತು .
ಸಭೆಯಲ್ಲಿ ತಾಲೂಕಾ ಮುಖ್ಯಸ್ಥ ಮನೋಹರ ಹುಂದಾರೆ, ಉಪಾಧ್ಯಕ್ಷ ವಾಸು ಸಾಮ್ಜಿ, ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ಕದಂ. ಉಪಾಧ್ಯಕ್ಷ ರಾಜು ಕದಂ, ಖಜಾಂಚಿ ವಿನಾಯಕ ಕಾವ್ಲೆ, ಸೂರಜ್ ಕುಡುಚಕರ್, ಸಂತೋಷ ಕೃಷ್ಣಾಚೆ, ಮಹೇಶ ಜಾಧವ, ಆಕಾಶ ಭೇಕೆ, ಆನಂದ ಪಾಟೀಲ, ವಿಶಾಲ ಅಣ್ವೇಕರ ಮೊದಲಾದವರು ಉಪಸ್ಥಿತರಿದ್ದರು..

Tags: