Uncategorized

ಹೊಸ ಅತಿಥಿ ಆಗಮನಕ್ಕೆ ಕಾಯುತ್ತಿದ್ದ ಗಂಡ ಹೆಂಡತಿ ಬಾಳಲ್ಲಿ ವಿಧಿಯಾಟ

Share

ತುಂಬು ಗರ್ಭಿಣಿಯಾಗಿದ್ದ ಆಕೆ ಕೆಲ ದಿನಗಳ ಹಿಂದಷ್ಟೇ ಗಂಡನ ಜೊತೆಗೆ ಮದುವೆ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದಳು. ಇನ್ನೊಂದೆ ತಿಂಗಳಲ್ಲಿ ಗಿಫ್ಟ್ ಆಗಿ ಪುಟಾಣಿ ಮಗು ಕೊಡೊದಾಗಿ ಹೇಳಿದ್ದಳು. ದುರಾದೃಷ್ಟ ಅಂದ್ರೆ ಹೆರಿಗೆಗೆ ಅಂತಾ ಹೊರಟಿದ್ದ ವೇಳೆ ನಡೆಯಬಾರದ ಘಟನೆಯೊಂದು ನಡೆದು ಹೊಟ್ಟೆಯಲ್ಲಿದ್ದ ಮಗುವಿನ ಸಮೇತ ಸಾವಿನ ಮನೆ ಸೇರಿದ್ದಾಳೆ. ಮನೆಗೆ ಹೊಸ ಅತಿಥಿ ಬರುವ ನಿರೀಕ್ಷೆಯಲ್ಲಿದ್ದ ಗಂಡನಿಗೆ ಸಾವನ್ನೆ ಗಿಫ್ಟ್ ಆಗಿ ನೀಡಿದ್ದಾಳೆ. ಅಷ್ಟಕ್ಕು ಹೃದಯವಿದ್ರಾವಕ ಘಟನೆಗೆ ಸಾಕ್ಷಿಯಾಗಿದ್ದು ವಿಜಯಪುರ ಜಿಲ್ಲೆ..ಈ ಕುರಿತು ಇಲ್ಲಿದೆ ಡಿಟೇಲ್ಸ್..

ಈ ಪೋಟೋದಲ್ಲಿ ಕಾಣ್ತಿರೋ ಈಕೆಯ ಹೆಸ್ರು ಭಾಗ್ಯಶ್ರೀ ಪಾರಣ್ಣವರ್ ಅಂತಾ, ವಯಸ್ಸು 20. ಮೊದಲನೇ ಹೆರಿಗೆಗೆ ಅಂತಾ ಅಂಬುಲೇನ್ಸ್‌ನಲ್ಲಿ ತಾಳಿಕೋಟೆಯಿಂದ ವಿಜಯಪುರದ ಜಿಲ್ಲಾ ಹೆರಿಗೆ ಆಸ್ಪತ್ರೆಗೆ ಬರ್ತಿದ್ದ ವೇಳೆ ಸಾವನ್ನಪ್ಪಿದ್ದಾಳೆ. ಅಷ್ಟಕ್ಕು ಆಗಿದ್ದೇನು ಅಂದ್ರೆ, ತಾಳೆಕೋಟೆ ತಾಲೂಕಾಸ್ಪತ್ರೆಯಿಂದ ಜಿಲ್ಲಾಸ್ಪತ್ರೆಗೆ 108 ಅಂಬುಲೇನ್ಸ್ ನಲ್ಲಿ ಬರೋವಾಗ ವೇಗವಾಗಿ ಹೊರಟಿದ್ದ ಅಂಬುಲೇನ್ಸ್ ನಿಂತಿದ್ದ ಟ್ರಾಕ್ಟರ್‌ಗೆ ಗುದ್ದಿದೆ. ಪರಿಣಾಮ ಅಂಬುಲೇನ್ಸ್ ಪಲ್ಟಿಯಾಗಿ ಒಳಗಿದ್ದವರು ಗರ್ಭೀಣಿಯ ಮೇಲೆ ಬಿದ್ದಿದ್ದಾರೆ. ಪರಿಣಾಮ ಗರ್ಭಿಣಿ ಭಾಗ್ಯಶ್ರೀ ಹೊಟ್ಟೆಗೆ ಪೆಟ್ಟು ಬಿದ್ದು ಹೊಟ್ಟೆಯಲ್ಲಿದ್ದ ಮಗು ಹಾಗೂ ಆಕೆ ಸಾವನ್ನಪ್ಪಿದ್ದಾರೆ.

ಕಳೆದ ವರ್ಷ ಕಳೆದ ಡಿಸೆಂಬರ್ 2 ರಂದು ವಿಜಯಪುರ‌ ನಗರದ ರಾವುತಪ್ಪ ಜೊತೆಗೆ ಮದುವೆಯಾಗಿತ್ತು. ಮೊನ್ನೆಯಷ್ಟೇ ಗಂಡ ಹೆಂಡತಿ ಸೇರಿ ಸಿಂಪಲ್ ಆಗಿಯೇ‌‌ ಕೇಕ್ ಕಟ್ ಮಾಡಿ ಮದುವೆ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದರು. ಆಗ ಗಂಡನಿಗೆ ಕೆಲವೆ ದಿನಗಳಲ್ಲಿ ಮಗುವನ್ನ ಗಿಫ್ಟ್ ನೀಡೋದಾಗಿ ಹೇಳಿದ್ದಳು. ಆದ್ರೆ ದುರ್ವಿಧಿ ಎಂದ್ರೆ ವಾರ್ಷಿಕೋತ್ಸವ ಆಚರಿಸಿಕೊಂಡ ವಾರದಲ್ಲೆ ಅಪಘಾತದಲ್ಲಿ ಹೊಟ್ಟೆಯಲ್ಲೆ ಮಗು ಇಟ್ಟಿಕೊಂಡೆ ಸಾವಿನ ದಾರಿ ಹಿಡಿದಿದ್ದಾಳೆ.

ಇನ್ನೂ ತುಂಬು ಗರ್ಭಿಣಿಯಾಗಿದ್ದ ಭಾಗ್ಯಶ್ರೀ ತಾಳೀಕೋಟೆಯ ತವರು ಮನೆಯಲ್ಲಿದ್ದಳು.ಹೆರಿಗೆ ನೋವು ಕಾಣಿಸಿಕೊಂಡಾಗ ಕುಟುಂಬಸ್ಥರು ತಾಳಿಕೋಟೆ ತಾಲೂಕಾಸ್ಪತ್ರೆಗೆ ಕೊಂಡೊಯ್ದಿದ್ದರು, ಆದ್ರೆ ಇಲ್ಲಿ ವೈದ್ಯರು ಕೇರ್ ಮಾಡಿಲ್ಲವಂತೆ. ತಾವು ಸರಿಯಾಗಿ ಚಿಕಿತ್ಸೆ ನೀಡದೆ ವೈದ್ಯರು ತಾಳಿಕೋಟೆಯಿಂದ ವಿಜಯಪುರಕ್ಕೆ ಕಳಿಸಿದ್ರು ಹೀಗಾಗಿ ಅಪಘಾತ ಉಂಟಾಗಿದೆ ಎಂದು ಭಾಗ್ಯಶ್ರೀ ಕುಟುಂಬಸ್ಥರು ಆರೋಪಿಸಿದ್ದಾರೆ. ಭಾಗ್ಯಶ್ರೀ ಸಾವಿಗೆ ತಾಳಿಕೋಟೆ ವೈದ್ಯರೇ ಕಾರಣ ಎಂದು ಭಾಗ್ಯಶ್ರೀ ಕುಟುಂಬಸ್ಥರು ತಾಲೂಕಾಸ್ಪತ್ರೆಯಲ್ಲಿ ಗಲಾಟೆ ಮಾಡಿದ್ದಾರೆ. ವೈದ್ಯರ ಮೇಲೆ ಹಲ್ಲೆಗು ಯತ್ನಿಸಿದ್ದಾರೆ. ಈ ಹಲ್ಲೆಗೆ ಯತ್ನ ಮಾಡಿದ ಘಟನೆಯನ್ನ ಖಂಡಿಸಿ ತಾಲೂಕಾಸ್ಪತ್ರೆ ಸಿಬ್ಬಂದಿ-ವೈದ್ಯರು ಪ್ರತಿಭಟನೆ ನಡೆಸಿದ ಘಟನೆಯು ನಡೆದಿದೆ. ಇತ್ತ ಭಾಗ್ಯಶ್ರೀ ಪೋಷಕರು ವೈದ್ಯರ ವಿರುದ್ಧ ಅದೆ ಜಾಗದಲ್ಲಿ ಪ್ರತಿಭಟನೆ ನಡೆಸಿದ್ದಾರೆ.

ಒಟ್ಟಿನಲ್ಲಿ ಮಗು ಹೆತ್ತು ಗಂಡನ ಕೈಗೆ ಗಿಫ್ಟ್‌ ಕೊಡುವ ಆಸೆ ಇಟ್ಟುಕೊಂಡಿದ್ದ ಭಾಗ್ಯಶ್ರೀ ಬಾರದ ಲೋಕಕ್ಕೆ ತೆರಳಿದ್ದಾರೆ. ಇತ್ತ ಪೋಷಕರು ವೈದ್ಯರ ನಿರ್ಲಕ್ಷ್ಯದ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.

ವಿಜಯಕುಮಾರ ಸಾರವಾಡ
ಇನ್ ನ್ಯೂಜ್
ವಿಜಯಪುರ..

Tags: