ನೂರಾರು ವರ್ಷದ ಇತಿಹಾಸವುಳ್ಳ ಗೋಕಾಕ ತಾಲೂಕಿನ ಅರಭಾವಿಮಠದ ದುರದುಂಡೇಶ್ವರ ಸಿದ್ಧಸಂಸ್ಥಾನ ಮಠದ ಶ್ರೀ ಸಿದ್ದಲಿಂಗ ಮಹಾಸ್ವಾಮೀಜಿ(೬೪) ಲಿಂಗೈಕ್ಯರಾಗಿದ್ದರು
ಸಾಯಂಕಾಲ.6 ಗಂಟೆಗೆ ಹಲವು ಮಠಾಧೀಶರ ಸಮ್ಮುಖದಲ್ಲಿ ವೀರಶೈವ ಲಿಂಗಾಯತ ವಿಧಿ ವಿಧಾನಗಳೊಂದಿಗೆ ಅಂತ್ಯ ಸಂಸ್ಕಾರ ನಡೆಸಲಾಯಿತು.
ಕರ್ನಾಟಕ ಅಷ್ಟೇ ಅಲ್ಲದೆ ಹೊರ ರಾಜ್ಯಗಳಲ್ಲಿಯೂ ಸ್ವಾಮೀಜಿ ಅಪಾರ ಭಕ್ತರನ್ನು ಹೊಂದಿದ್ದರು.
ಇವರ ನಿಧನ ಸುದ್ದಿ ತಿಳಿದ ಭಕ್ತರು ಗೋಕಾಕದ ಆದಿಜಾಂಬವ ನಗರ್ಡ್ ಹತ್ತಿರ ಇರುವ ಖಾಸಗಿ ಆಸ್ಪತ್ರೆ ಮುಂದೆ ಸಾವಿರಾರು ಭಕ್ತರು ಪೊಲೀಸ್ ಸಿಬ್ಬಂದಿಗಳು, ತಾಲೂಕಾ ಅಧಿಕಾರಿಗಳು ಹಾಸ್ಪತ್ರೆಯಲ್ಲಿ ಬಿಡು ಬಿಟ್ಟಿದ್ದಾರೆ. ನೂರಾರು ಭಕ್ತರು ಆಸ್ಪತ್ರೆ ಆವರಣದಲ್ಲಿ ಜಮಾವಣೆಗೊಂಡು ಶೋಕಸಾಗರಲ್ಲಿ ಮುಳುಗಿದ್ದಾರೆ.
ಭಕ್ತರ ಆಕ್ರಂದನ ಮುಗಿಲು ಮುತ್ತಿಟ್ಟು ಶ್ರೀಗಳ ಅಗಲಿಕೆಯಿಂದ ಶ್ರೀಮಠದ ಭಕ್ತರು ಕುಟುಂಬ ಸಮೇತವಾಗಿ ಆಗಮಿಸಿ ಅಂತ್ಯ ಸಂಸ್ಕಾರದಲ್ಲಿ ಭಾಗಿಯಾಗಿದ್ದರು