ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಕಾಕತಿ ನಗರದಲ್ಲಿ ಬರ್ಡೆ ಪಂಪ್ ಬಳಿಯ ವಿನೋದ್ ಬಸವಂತ್ ತರ್ಲೆ ಅವರ ಗ್ಯಾರೇಜ್ನ ಬೀಗ ಮುರಿದು ಒಳನುಗ್ಗಿದ ಕಳ್ಳರು ಸುಮಾರು ಒಂದೂವರೆ ಲಕ್ಷ ರೂಪಾಯಿ ಮೌಲ್ಯದ ಸಾಮಗ್ರಿಗಳನ್ನು ಕದ್ದೊಯ್ದಿದ್ದಾರೆ. ಶನಿವಾರ ಮಧ್ಯರಾತ್ರಿ ಈ ಘಟನೆ ನಡೆದಿದೆ.
ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಕಾಕತಿಯಲ್ಲಿ ಬರ್ಡೆ ಪಂಪ್ ಬಳಿ ವಿನೋದ್ ಬಸವಂತ್ ತರ್ಲೆ ಅವರ ಮಾಲೀಕತ್ವದ ಬೈಕ್ ಮತ್ತು ಕಾರು ರಿಪೇರಿ ಮಾಡುವ ಗ್ಯಾರೇಜನಲ್ಲಿ . ಶನಿವಾರ ಮಧ್ಯರಾತ್ರಿಯ ಕಳ್ಳರು ಕಟರ್ನಿಂದ ಗ್ಯಾರೇಜ್ನ ಶೆಟರ್ನ ಬೀಗವನ್ನು ಮುರಿದು ಸುಮಾರು ಒಂದೂವರೆ ಲಕ್ಷ ರೂಪಾಯಿ ಮೌಲ್ಯದ ಡೆಂಟಿಂಗ್ ಯಂತ್ರ, ನಾಲ್ಕು ಬ್ಯಾಟರಿಗಳು ಮತ್ತು ಸಾಮಗ್ರಿಗಳನ್ನು ಕದ್ದೊಯ್ದಿದ್ದಾರೆ.
ಈ ಕುರಿತು ಇನ್ ನ್ಯೂಸ್ ಗೆ ಮಾಹಿತಿ ನೀಡಿದ ಗ್ಯಾರೇಜ್ ಮಾಲೀಕ ವಿನೋದ್ ತರ್ಲೆ, ಎಂದಿನಂತೆ ಶನಿವಾರ ರಾತ್ರಿ 9.30ಕ್ಕೆ ಗ್ಯಾರೇಜ್ ನ ಶಟರ್ ಮುಚ್ಚಿ ಮನೆಗೆ ಹೋಗಿದ್ದೆವು. ರಾತ್ರಿ 12 ಗಂಟೆ ಸುಮಾರಿಗೆ ಕಳ್ಳತನ ನಡೆದಿದೆ. ಗ್ಯಾರೇಜ್ ಮುಂದೆ ನಿಲ್ಲಿಸಿದ್ದ ಕಾರ್ ಡೆಂಟಿಂಗ್ ಮಶೀನ್, 4 ಕಾರುಗಳ ಬ್ಯಾಟರಿ ಮತ್ತು ಸಾಮಗ್ರಿಗಳನ್ನು ಕಳ್ಳರು ಕದ್ದೊಯ್ದಿದ್ದಾರೆ. ಗ್ಯಾರೇಜನಲ್ಲಿ ಮೊದಲು ಕಳ್ಳತನ ಮಾಡಲಾಗಿತ್ತು ಈಗ ಎರಡನೇ ಬಾರಿ ಕಳ್ಳತನ ಮಾಡಲಾಗಿದೆ ಕಾಕತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ , ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪಂಚನಾಮೆ ನಡೆಸಿದ್ದಾರೆ.
ಸಾಲ ಮಾಡಿ ವ್ಯಾಪಾರ ಆರಂಭಿಸಿದ್ದೇವೆ ಈ ಘಟನೆ ಮಾಸದ ಗಾಯವನ್ನು ಮಾಡಿದೆ, ಘಟನೆಯ ಬಗ್ಗೆ ಪೊಲೀಸರು ತನಿಖೆ ನಡೆಸಬೇಕು ಮತ್ತು ಸರ್ಕಾರ ಸಹಾಯ ಮಾಡಬೇಕು ಎಂದು ಒತ್ತಾಯಿಸಿದರು.
ಈ ವಾರ ಕಾಕತಿಯಲ್ಲಿ ಸುಮಾರು ನಾಲ್ಕೈದು ಕಡೆ ಕಳ್ಳತನ ನಡೆದಿದೆ. ಇದರಿಂದ ವ್ಯಾಪಾರಸ್ಥರು ಆತಂಕಗೊಂಡಿದ್ದಾರೆ ಕಳ್ಳರನ್ನು ಬಂಧಿಸಿ ನ್ಯಾಯ ನೀಡುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ .