ಮಹಿಳೆಯನ್ನ ಚಪ್ಪಲಿ ಹಾರ ಹಾಕಿ, ಥಳಿಸಿ ಮೆರವಣಿಗೆ ಮಾಡಿದ ಅಮಾನವೀಯ ಪ್ರಕರಣಕ್ಕೆ ಟ್ವಿಸ್ಟ್ ದೊರಕಿದೆ ಮಾಧ್ಯಮಗಳಲ್ಲಿ ವರದಿ ಪ್ರಸಾರ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಘಟಪ್ರಭಾ ಪೊಲೀಸರು ದಲಿತ ಮುಖಂಡ ಅರ್ಜುನ್ ಗುಂಡಪ್ಪಗೋಳ ಸೇರಿ 20 ಜನರ ವಿರುದ್ಧ ಕೇಸ್ ದಾಖಲು ಮಾಡಿದ್ದಾರೆ
ಹನಿಟ್ರ್ಯಾಪ್ ಮಾಡುತ್ತಿದ್ದಾಳೆಂದು ಆರೋಪಿಸಿ ಚಪ್ಪಲಿ ಹಾರಹಾಕಿ ಥಳಿಸಿದ್ದ ಆರೋಪಿಗಳು ಅವಾಚಶಬ್ಧಗಳಿಂದ ನಿಂದನೆ, ಕೊಲೆಗೆ ಯತ್ನ ಮತ್ತು ಮಾನಹರಾಜು ಹಾಕಿದ್ದಾರೆಂದು ದೂರಿನಲ್ಲಿ ಉಲ್ಲೇಖಿಸಿರೋ ಸಂತ್ರಸ್ತ ಮಹಿಳೆ ಶ್ರೀದೇವಿ ಗೊಡಚಿಯಿಂದ ದೂರು ದಾಖಲಾದ ಬೆನ್ನಲ್ಲೇ ಬೆಳಗಾವಿ ಜಿಲ್ಲೆಯ ಘಟಪ್ರಭಾ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ
ಎ1 ಆರೋಪಿ ಅರ್ಜುನ ಗುಂಡಪ್ಪಗೋಳನನ್ನ ಅರೇಸ್ಟ್ ಮಾಡಿ ಜೈಲಿಗೆ ಕಳುಸಿದ ಪೊಲೀಸರು ಇನ್ನೂಳಿದ ಪುರುಷ ಮತ್ತು ಮಹಿಳಾ ಆರೋಪಿಗಳನ್ನ ಬಂಧಿಸಲು ತಂಡ ರಚನೆ ಮಾಡಿದ್ದಾರೆ ಮನೆಗೆ ನುಗ್ಗಿ ಹಲ್ಲೆ ಮಾಡಿ ಚಪ್ಪಲಿ ಹಾರ ಹಾಕಿದವರ ವಿರುದ್ಧ ಹೆಸರು ಸಮೇತ ಕೇಸ್ ಫೈಲ್ ಮಾಡಿದ್ದಾರೆ .
Uncategorized
ಮಾಧ್ಯಮಗಳಲ್ಲಿ ವರದಿ ಪ್ರಸಾರ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಪೊಲೀಸರು
