Uncategorized

ಐನಾಪುರದ ಗ್ರಾಮದೇವತೆ ಶ್ರೀ ಸಿದ್ದೇಶ್ವರ ದೇವರ ಜಾತ್ರೆ ನಾಳೆಯಿಂದ ಪ್ರಾರಂಭ

Share

ಉತ್ತರ ಕರ್ನಾಟಕ ಹಾಗೂ ಪಶ್ಚಿಮ ಮಹಾರಾಷ್ಟ್ರ ರಾಜ್ಯದ ಗಡಿ ಗ್ರಾಮಗಳಲ್ಲಿ ಬೃಹತ್ ಕೃಷಿಮೇಳ ಹಾಗೂ ಜಾನುವಾರುಗಳ ಪ್ರದರ್ಶನ ಕಾರ್ಯಕ್ರಮಕ್ಕೆ ಖ್ಯಾತಿ ಪಡೆದ ಕಾಗವಾಡ ತಾಲೂಕಿನ ಐನಾಪುರ್ ಪಟ್ಟಣದ ಗ್ರಾಮದೇವತೆ ಶ್ರೀ ಸಿದ್ದೇಶ್ವರ ದೇವರ ಜಾತ್ರೆ ನಿಮಿತ್ಯ ಹಮ್ಮಿಕೊಂಡ ಕೃಷಿಮೇಳ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ ಎಂದು ಕೃಷಿ ಮೇಳದ ಸಂಚಾಲಕರಾದ ಪ್ರಶಾಂತ ಅಪರಾಜ್ ಮತ್ತು ಸಂಜೀವ ಬಿರಡಿ ಜಂಟಿಯಾಗಿ ಹೇಳಿದರು.

ರವಿವಾರ ರಂದು ಐನಾಪುರ್ ಪಟ್ಟಣದಲ್ಲಿ ಹಮ್ಮಿಕೊಂಡ ಭವ್ಯ ಕೃಷಿ ಮೇಳ ಸಿದ್ಧತೆ ಬಗ್ಗೆ ಪರಿಶೀಲನೆ ಮಾಡಿ ಮಾತನಾಡಿದ ಅವರು .ಕೃಷಿ ಮೇಳದಲ್ಲಿ 150 ಮಳಿಗೆಗಳು ನಿರ್ಮಿಸಿದ್ದು, ಇದರಲ್ಲಿ ಹೊಸ ತಂತ್ರಜ್ಞಾನಗಳು ಹೊಂದಿರುವ ಕೃಷಿ ಉಪಕರಣಗಳು, ಬೇರೆ-ಬೇರೆ ತರದ ಬೀಜಗಳು, ಸಸಿಗಳು ಯಂತ್ರ ಸಾಮೂಗ್ರಿಗಳ ಪ್ರದರ್ಶನ ಹಾಗೂ ಮಾರಾಟಕ್ಕೆ ಸಿದ್ಧವಾಗಲಿವೆ. ಅಲ್ಲದೆ ಕೃಷಿ ಸಮ್ಮೇಳನದಲ್ಲಿ ಕೃಷಿ ತಜ್ಞರು ಮಾರ್ಗದರ್ಶನ ನೀಡಲಿದ್ದಾರೆ. ಇದರ ಸದುಪಯೋಗ ರೈತ ಬಾಂಧವರು ಪಡೆದುಕೊಳ್ಳಬೇಕೆಂದು ಪ್ರಶಾಂತ ಅಪ್ರರಾಜ ಮನವಿ ಮಾಡಿಕೊಂಡರು.

ಸಂಜೀವ ಬಿರಡಿ ಮಾತನಾಡುತ್ತಾ ಐನಾಪುರದಲ್ಲಿ ಹಿರಿಯರು ಸಿದ್ದೇಶ್ವರ ದೇವರ ಜಾತ್ರೆ ಪ್ರಾರಂಭಿಸಿ ಈಗ 54 ಜಾತ್ರೆ 31 ನೆ ಕೃಷಿ ಮೇಳ ಜರುಗಲಿದೆ. ಗ್ರಾಮೀಣ ಭಾಗದ ರೈತರಿಗೆ ದನ-ಕರು ಮಾರಾಟ ಮಾಡುವುದು ಖರೀದಿಸುವುದು, ಕೃಷಿ ಸಲಕರಣೆಗಳು ಖರಿದಿಸುವುದು ಹಾಗೂ ಮನೋರಂಜನೆ ನೀಡುವ ಉದ್ದೇಶದಿಂದ ಜಾತ್ರೆ ಪ್ರಾರಂಭಿಸಲಾಗಿದೆ. ಇದು ನಿರಂತರವಾಗಿ ಮುಂದೆವರೆಯಲಿದ್ದು ಸರ್ಕಾರದ ಯಾವುದೇ ಸಹಾಯ ಸವಲತ್ತು ಜಾತ್ರಾ ಕಮಿಟಿಗೆ ದೊರತಿಲ್ಲ ಎಂದು ಹೇಳಿದರು.


ಸೋಮವಾರ ರಂದು ಸಂಜೆ ಸಿದ್ಧೇಶ್ವರ ಜಾತ್ರಾ ಕಮಿಟಿಯ ಅಧ್ಯಕ್ಷ ಸುಭಾಷ ಪಾಟೀಲ್, ಉಪಾಧ್ಯಕ್ಷ ರಾಜುಗೌಡ ಪಾಟೀಲ್ ಹಾಗೂ ಸಂಚಾಲಕರ ನೇತೃತ್ವದಲ್ಲಿ ಕವಲಗುಡ್ಡ ಸಿದಗಿರಿ ಮಠದ ಅಮರೇಶ್ವರ ಮಹಾರಾಜರು, ಐನಾಪುರದ ಬಸವೇಶ್ವರ ಮಹಾರಾಜರು ಇವರ ಸಾನಿಧ್ಯದಲ್ಲಿ ಕಾಗವಾಡ ಶಾಸಕ ರಾಜು ಕಾಗೆ ಕೃಷಿ ಮೇಳ ಉದ್ಘಾಟಿಸಲಿದ್ದಾರೆ. ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಳಲ್ಲಿದ್ದಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಗುರುರಾಜ ಮಡಿವಾಳರ, ಬಾಹುಬಲಿ ಕುಸನಾಳೆ, ಅನಿಲ್ ಸತ್ತಿ, ಶೀತಲ್ ಬಾಲೋಜಿ, ಅಮಿತ್ ಡೂಗ್ಗನವರ್, ವಿಕಾಸ್ ಜಾದವ್, ಶೀತಲ್ ಬಾಲೋಜಿ, ಸಾಗರ್ ಕಾಡಾಪುರೆ, ಸಂತೋಶ ಪಾಟೀಲ, ಸುರೇಶ ಅಡಿಸೇರಿ, ಅಮಗೌಡಾ ಒಡೆಯರ ಸೇರದಂತೆ ಅನೇಕರು ಇದ್ದರು.

ಸುಕುಮಾರ ಬನ್ನೂರೆ
ಇನ್ ನ್ಯೂಸ್ ಕಾಗವಾಡ

Tags: