Uncategorized

ಮೂರು ತಲೆಮಾರಿಯಿಂದ ಮಹಾತ್ಮಾ ಗಾಂಧೀಜಿ ಜಯಂತಿ ಆಚರಿಸುತ್ತಿರುವ ಯಾದವಾಡೆ ಬಂಧುಗಳು

Share

ಅಪ್ಪಟ ಗಾಂಧಿವಾದಿ ಶೇಡಬಾಳದ ಯಾದವಾಡೆ ಬಂಧುಗಳು ಮೂರು ತಲೆಮಾರಿಯಿಂದ ಮಹಾತ್ಮಾ ಗಾಂಧೀಜಿ ಜಯಂತಿ ಆಚರಿಸುತ್ತಾ ಬಂದಿದ್ದಾರೆ
ವೈಸ್ ಓವರ್
ದೇಶಕ್ಕೆ ಸ್ವರಾಜ ತಂದುಕೊಟ್ಟ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಇವರ ಜಯಂತಿಯನ್ನು ಅಕ್ಟೋಬರ್ 2 ರಂದು ದೇಶದ ಎಲ್ಲಡೆ ಆಚರಿಸುತ್ತಾರೆ, ಅದರಂತೆ ಕಾಗವಾಡ ತಾಲೂಕಿನ ಶೇಡಬಾಳ ಪಟ್ಟಣದ ಅಪ್ಪಟ ಗಾಂಧಿವಾದಿ ಕುಟುಂಬದವರಾದ ದಿವಂಗತ ಜಿನ್ನಪ್ಪಾ ಯಾದವಾಡೆ ಇವರ ನಂತರ ಮಕ್ಕಳು, ಮ್ಮೊಕ್ಕಳು, ಮರಿ ಮಕ್ಕಳು ಅದ್ದೂರಿವಾಗಿ ಗಾಂಧಿ ತಾತನ ಜಯಂತಿ ಆಚರಿಸುತ್ತಿರುವುದು ವಿಶೇಷವಾಗಿದೆ.

ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಇವರು ಚಳವಳಿ ನಿಮಿತ್ಯವಾಗಿ ರೈಲು ಮುಖಾಂತರ ಶೇಡಬಾಳ ಗ್ರಾಮಕ್ಕೆ ಆಗಮಿಸಿದರು ಆಗ ಜಿನ್ನಪ್ಪಾ ಯಾದವಾಡೆ ಮಹಾತ್ಮ ಗಾಂಧೀಜಿ ಇವರನ್ನು ಭೇಟಿಯಾಗಿದ್ದರು ಆಗ ಸ್ವರಾಜ್ ಬಗ್ಗೆ ಮಹಾತ್ಮಾ ಗಾಂಧೀಜಿ ನೀಡಿರುವ ಸಂದೇಶ ತೆಗೆದುಕೊಂಡು ಹೋರಾಡಿದರು. ಅಕ್ಟೋಬರ್ 2 ರಂದು ಜಿನ್ನಪ್ಪಾ ಯಾದವಾಡೆ ಇವರು ಗಾಂಧೀಜಿಯವರ ಭಾವಚಿತ್ರ ತೆಲೆ ಮೇಲೆ ತೆಗೆದುಕೊಂಡು ಗ್ರಾಮದಲ್ಲಿ ಸುತ್ತಾಡಿ ಮಹಾತ್ಮ ಗಾಂಧೀಜಿ ಇವರ ಸಂದೇಶ ಹೇಳುತ್ತಿದ್ದರು.
ಕೆಲ ದಿನಗಳ ಬಳಿಕ ಎತ್ತಿನಗಾಡಿಯಲ್ಲಿ ಪ್ರತಿಮೆ ತೆಗೆದುಕೊಂಡು ಮೆರವಣಿಗೆ ಮಾಡಿಕೊಂಡರು. ನಂತರ ಸೈಕಲ್ ಮೇಲಿಂದ ಮೆರವಣಿಗೆ ಮಾಡುತ್ತಿದ್ದರು, ಅವರಿಗೆ ಅವರ ಸುಪುತ್ರ ಬಾಹುಬಲಿ ಧರ್ಮ ಪತ್ನಿ ಜಿನಮತಿ ಸಾಥ್ ನೀಡಿದ್ದರು . ಅವರ ನಿಧನದ ಬಳಿಕ ಬಾಹುಬಲಿ ಯಾದವಾಡೆ ಹಾಗೂ ಅವರ ಸುಪುತ್ರರಾದ ಜಯಧವಲ, ಮಹಾಧವಲ ಅವರೊಂದಿಗೆ ಸೊಸೆಯಂದರು, ಈಗ ಮೊಮ್ಮಕ್ಕಳಾದ ರಾಜಶ್ರೀ, ಶ್ರೇಯಾ ಇವರು ಒಂದು ಗುಡಿ ಜಯಂತಿ ಆಚರಿಸುತಿದ್ದೇವೆ ಎಂದರು.

ಶೇಡಬಾಳದ ನ್ಯಾಯವಾದಿಗಳಾದ ಅಶೋಕ್ ಮುತಾರಿ ಮಾತನಾಡಿ, ಶೇಡಬಾಳದ ಅಪ್ಪಟ ಗಾಂಧಿವಾದಿ ಕುಟುಂಬವಾದ ಯಾದವಾಡೆ ಬಂಧುಗಳು ಕಳೆದ ಅನೇಕ ವರ್ಷಗಳಿಂದ ಮಹಾತ್ಮಾ ಗಾಂಧೀಜಿ ಅವರ ತತ್ವಗಳು ಪಾಲಿಸಿ, ಜಯಂತಿ ಆಚರಿಸುತ್ತಾರೆ. ಮತ್ತು ಮನೆಗಳಲ್ಲಿ ದಿನನಿತ್ಯ ಗಾಂಧೀಜಿಯವರ ಪ್ರತಿಮೆಗೆ ಪೂಜೆ ಸಲ್ಲಿಸಿದ ನಂತರ ಬಾಯೊಳಗೆ ನೀರು ಸೇವಿಸುತ್ತಾರೆ. ಇದು ಒಂದು ಆದರ್ಶ ಕುಟುಂಬ ಎಂದು ಹೇಳಿದರು.

ಈ ವೇಳೆ ಅವರ ಸ್ನೇಹಿತರಾದ ವಿಜಯ ಶಿಂದೆ, ರಾಜೇಶ್ ಶಿಂದೆ, ಸಾಗರ್ ಮಾಂಗಲ್ಲೆ, ಬಸವರಾಜ್ ಮಾಂಗಲ್ಲೆ ಸೇರಿದಂತೆ ಅನೇಕರು ಗಾಂಧೀಜಿಯವರ ಪ್ರತಿಮೆ ದೊಂದಿಗೆ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ಸುಕುಮಾರ ಬನ್ನೂರೆ
ಇನ್ ನ್ಯೂಸ್ ಕಾಗವಾಡ

Tags: