ಈಕೆ ಮದುವೆಯಾದಂದಿನಿಂದ ಗಂಡನ ಸಂಪತ್ತನ್ನು ನೀರಿನಂತೆ ಖರ್ಚು ಮಾಡುತ್ತಿದ್ದಾರೆ. ಅವರು ತಮ್ಮ ಐಷಾರಾಮಿ ಜೀವನವನ್ನು ಸಾಮಾಜಿಕ ಮಾಧ್ಯಮದಲ್ಲಿ ಜನರೊಂದಿಗೆ ಹಂಚಿಕೊಳ್ಳುತ್ತಾರೆ.
ಜನಸಾಮಾನ್ಯರನ್ನು ದಿನವೊಂದಕ್ಕೆ ಎಷ್ಟು ಖರ್ಚು ಮಾಡ್ತೀರಾ ಅಂತ ಕೇಳಿದ್ರೆ ಬಹುತೇಕ ಮಂದಿ ಸಾವಿರ ರೂಪಾಯಿ ಒಳಗೆ ಅಂತಾರೆ. ಇನ್ನೂ ಮಧ್ಯಮ ವರ್ಗದವರು ಬಿಡಿ, 500 ರೂಪಾಯಿ ದಿನವೊಂದಕ್ಕೆ ಖರ್ಚಾದ್ರೆ ಬೇಸರಗೊಳ್ಳುತ್ತಾರೆ.
ಈಕೆ ದಿನವೊಂದಕ್ಕೆ 14 ಲಕ್ಷ ಹಣ ಖರ್ಚು ಮಾಡ್ತಾಳೆ ಅಂತ ಹೇಳಿದ್ರೆ ನಿಮಗೆ ಶಾಕ್ ಆಗುತ್ತೆ. ಸೋಷಿಯಲ್ ಮೀಡಿಯಾ ಇನ್‌ಫ್ಲೂಯೆನ್ಸರ್ ಲಿಂಡಾನೇ ದಿನವೊಂದಕ್ಕೆ ಇಷ್ಟು ಹಣ ಖರ್ಚು ಮಾಡೋದು.
ಲಿಂಡಾ ಆಂಡ್ರೇಡ್ ಪ್ರಸ್ತುತ ಸಾಮಾಜಿಕ ಮಾಧ್ಯಮದಲ್ಲಿ ಸುದ್ದಿಯಲ್ಲಿದ್ದಾರೆ. 24 ವರ್ಷದ ಲಿಂಡಾ ದುಬೈನಲ್ಲಿ ವಾಸಿಸುತ್ತಿದ್ದಾರೆ. ಈಕೆ ಬಿಲಿಯನೇರ್ ಕೈಗಾರಿಕೋದ್ಯಮಿಯನ್ನು ಮದುವೆಯಾಗಿದ್ದಾರೆ.
ಲಿಂಡಾ ಆಂಡ್ರೇಡ್ ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಟಿಕ್ ಟಾಕ್‌ನಲ್ಲಿ ಏಳು ಲಕ್ಷ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಎರಡು ಲಕ್ಷ ಜನ ಫಾಲೋವರ್ಸ್ ಹೊಂದಿದ್ದಾರೆ. ಆಕೆಯ ಸಂಪತ್ತಿನ ಪ್ರದರ್ಶನದಿಂದಾಗಿ ಜನರು ಅವಳನ್ನು ಬಹಳಷ್ಟು ಟ್ರೋಲ್ ಮಾಡುತ್ತಾರೆ. ಆದರೆ, ಲಿಂಡಾ ತನ್ನ ಟೀಕೆಗಳಿಗೆ ಹೆದರುವುದಿಲ್ಲ ಮತ್ತು ಪೋಸ್ಟ್ ಮಾಡುತ್ತಲೇ ಇರುತ್ತಾಳೆ.
ವೀಡಿಯೊ ಪೋಸ್ಟ್‌ನಲ್ಲಿ, ಲಿಂಡಾ ಅವರು ಇಂದು $ 7000-7000 (5.8 ಲಕ್ಷ ರೂ.) ಮೌಲ್ಯದ ಎರಡು ಶನೆಲ್ ಬ್ಯಾಗ್‌ಗಳನ್ನು ಖರೀದಿಸಿದ್ದಾರೆ ಎಂದು ಹೇಳುತ್ತಾರೆ. ಕಾರಿನ ಬಾಡಿಗೆಗೆ $16,540 (13.7 ಲಕ್ಷ) ಖರ್ಚು ಮಾಡಿದ್ದಳು.
ಒಂದು ದಿನದಲ್ಲಿ ಗಂಡನ 14 ಲಕ್ಷ ರೂಪಾಯಿ ಖರ್ಚು ಮಾಡುತ್ತೇನೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಈಕೆ ಮಾಡಿದ್ದಾಳೆ. ಲಿಂಡಾ ಎಂದಿಗೂ ಕಾಮೆಂಟ್‌ಗಳನ್ನು ಓದುವುದಿಲ್ಲ. ಜನರು ಕೆಲವೊಮ್ಮೆ ತನ್ನ ಖರ್ಚುಗಳನ್ನು ತುಂಬಾ ಗಂಭೀರವಾಗಿ ತೆಗೆದುಕೊಳ್ಳುತ್ತಾರೆ ಎಂದು ಅವರು ಹೇಳುತ್ತಾರೆ.