Uncategorized

ಅಂಬೇಡ್ಕರ ಪುಥ್ಥಳಿ ಅನಾವರಣೆಗೆ ಸಾವಿರಾರು ಜನ ಭಾಗಿ – ಸುರೇಶ ತಳವಾರ

Share

ಹುಕ್ಕೇರಿ ನಗರದಲ್ಲಿ ಪ್ರತಷ್ಟಾಪಿಸಿದ ಅಂಬೇಡ್ಕರ ಪುಥ್ಥಳಿ ಅನಾವರಣಕ್ಕೆ ತಾಲೂಕಿನ ಎಲ್ಲಾ ದಲಿತ ಬಾಂಧವರು ಕುಟುಂಬ ಸಮೇತ ಭಾಗವಹಿಸಿ ಯಶಸ್ವಿಗೋಳಿಸ ಬೇಕು ಎಂದು ಮಾಜಿ ವಾಯು ಮಾಲಿನ್ಯ ನಿಯಂತ್ರಣ ಮಂಡಳಿ ನಿರ್ದೆಶಕ ಸುರೇಶ ತಳವಾರ ಹೇಳಿದರು.

ಹುಕ್ಕೇರಿ ತಾಲೂಕಿನ ಕೋಟಬಾಗಿ ಗ್ರಾಮದಲ್ಲಿ ಹಮ್ಮಿಕೊಂಡ ಅಕ್ಷರದ ಅವ್ವ ಸಾವಿತ್ರಿಬಾಯಿ ಪುಲೆ ಮತ್ತು ಸ್ವಾಮಿ ವಿವೇಕಾನಂದ ಜಯಂತಿ ಹಮ್ಮಿಕೊಳ್ಳಲಾಗಿತ್ತು
ಬಸವ ಬೆಳವಿಯ ಶರಣಬಸವ ದೇವರ ದಿವ್ಯ ಸಾನಿಧ್ಯ ವಹಿಸಿದ್ದರು
ದಲಿತ ಸಮಾವೇಶ ವನ್ನು ಕರ್ನಾಟಕ ರಾಜ್ಯ ನೌಕರ ಸಂಘದ ಬೆಳಗಾವಿ ಜಿಲ್ಲಾ ಅದ್ಯಕ್ಷ ಬಸವರಾಜ ರಾಯವ್ವಗೋಳ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು.
ನಂತರ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ದಲಿತರನ್ನು ಸತ್ಕರಿಸಿ ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ವಾಯು ಮಾಲಿನ್ಯ ನಿಯಂತ್ರಣ ಮಂಡಳಿ ನಿರ್ದೆಶಕ ಸುರೇಶ ತಳವಾರ ದೇಶದ ಅಪ್ರತಿಮ ನಾಯಕರ ಜಯಂತಿ ಅಂಗವಾಗಿ ದಲಿತ ಸಮ್ಮೇಳನವನ್ನು ಹಮ್ಮಿಕೊಂಡು ಸಾವಿತ್ರಿಬಾಯಿ ಪುಲೆ, ಸ್ವಾಮಿ ವಿವೇಕಾನಂದ ಮತ್ತು ಅಂಬೇಡ್ಕರ ರವರ ವಿಚಾರಗಳನ್ನು ತಿಳಿಸಲಾಯಿತು ಮತ್ತು ಹುಕ್ಕೇರಿ ನಗರದಲ್ಲಿ ಬಾಬಾಸಾಹೇಬ ಅಂಬೇಡ್ಕರವರ ಪುಥ್ಥಳಿಯ ಅನಾವರಣ ಸಮಯದಲ್ಲಿ ತಾಲೂಕಿನ ಪ್ರತಿ ದಲಿತ ಕುಟುಂಬಸ್ಥರು ಹಾಜರಿದ್ದು ಜಾತ್ರೆಯಂತೆ ಆಚರಿಸೋಣ ಎಂದರು .

ವೇದಿಕೆ ಮೇಲೆ ವಿವಿಧ ದಲಿತ ಪರ ಸಂಘಟನೆಗಳ ಮುಖಂಡರಾದ ಶ್ರೀಕಾಂತ ತಳವಾರ, ಉದಯ ಹುಕ್ಕೇರಿ, ಸಿದ್ದರಾಯ ಮೇತ್ರಿ, ಪ್ರಮೋದ ಹೋಸಮನಿ, ವಿಕ್ರಂ ಕರನಿಂಗ, ಮಾರತಿ ತಳವಾರ, ಸಂತೋಷ ಗಸ್ತಿ, ಶಂಕರ ತಿಪ್ಪನಾಯಿಕ, ಸದಾ ಕಾಂಬಳೆ ,ಸಮಾಜ ಕಲ್ಯಾಣ ಅಧಿಕಾರಿ ಎಚ್ ಎ ಮಾಹುತ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಕೋಟಬಾಗಿ ದಲಿತ ಮುಖಂಡರಾದ ರಮೇಶ ಗೋಂಜಾಳಿ, ಮಹಾದೇವ ಮಾಸ್ತಿಹೋಳಿ, ಅನಿಲ ಹತ್ತರಗಿ, ಕಾಡಪ್ಪಾ ಹುಲ್ಲೋಳಿ ಹಾಗೂ ವಿವಿಧ ದಲಿತಪರ ಸಂಘಟನೆಗಳ ಒಕ್ಕೂಟಗಳ ಸದಸ್ಯರು, ಹುಕ್ಕೇರಿ ಮತ್ತು ಕೊಟಬಾಗಿ ಗ್ರಾಮಸ್ಥರು ಉಪಸ್ಥಿತರಿದ್ದರು.ನಂತರ ವಿವಿಧ ಮನರಂಜನೆ ಕಾರ್ಯಕ್ರಮಗಳು ಜರುಗಿದವು.

ರಾಜು ಬಾಗಲಕೋಟಿ
ಇನ್ ನ್ಯೂಸ್ ಹುಕ್ಕೇರಿ.

Tags: