ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ, ಕಟ್ಟಲಾಗಿರುವ ಅಂಕಲಿ ಹೈಟೆಕ್ ಬಸ್ ನಿಲ್ದಾಣ ಉದ್ಘಾಟನೆ ಗೊಳ್ಳದೇ ಸಾರ್ವಜನಿಕರು, ವಿದ್ಯಾರ್ಥಿಗಳು ಹೊಸ ಬಸ್ ನಿಲ್ದಾಣದ ಎದುರಿಗೆ ಬಸ್ಗಾಗಿ ಪರದಾಡುವ ಸ್ಥಿತಿ ಬಂದಿದೆ.
ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದಲ್ಲಿ ಕಳೆದ ಎರಡು ವರ್ಷಗಳ ಹಿಂದೆ, ಶಿಥಿಲಗೊಂಡ ಬಸ್ ನಿಲ್ದಾಣವನ್ನು ಕೆಡವಿ, ತಮ್ಮ ಹುಟ್ಟೂರಿನಲ್ಲಿ ಹೈಟೆಕ್ ಬಸ್ ನಿಲ್ದಾಣ ನಿರ್ಮಾಣಕ್ಕಾಗಿ ಡಾ. ಪ್ರಭಾಕರ ಕೋರೆ ಹಾಗೂ ಶಾಸಕ ಗಣೇಶ ಹುಕ್ಕೇರಿ ಪ್ರಯತ್ನದಿಂದ 2.40 ಕೋಟಿ ರೂಪಾಯಿ ವೆಚ್ಚದಲ್ಲಿ ಶಾಸಕ ಗಣೇಶ ಹುಕ್ಕೇರಿ ಅವರು ಆ ಕಾಮಗಾರಿಗೆ ಚಾಲನೆ ನೀಡಿದ್ದರು. ಅದರಂತೆ ನೂತನ ಹೈಟೆಕ್ ಬಸ್ ನಿಲ್ದಾಣವೂ ಕೂಡಾ ಪೂರ್ತಿ ತಯಾರಾಗಿ ನಿಂತಿದೆ. ಈ ಮಧ್ಯೆ ಚುನಾವಣೆ ಹಿನ್ನಲೆಯಲ್ಲಿ ಈ ಬಸ್ ನಿಲ್ದಾಣ ಉದ್ಘಾಟನೆಗೊಳ್ಳಲಿಲ್ಲ.
ಈಗ ನೂತನ ಸರ್ಕಾರ ಬಂದು, ಆರು ತಿಂಗಳು ಕಳೆದರೂ ಕೂಡಾ ಕೋಟಿ-ಕೋಟಿ ಖರ್ಚು ಮಾಡಿ, ನಿರ್ಮಿಸಿರುವ ನೂತನ ಬಸ್ ನಿಲ್ದಾಣ, ಸಾರ್ವಜನಿಕರಿಗೆ, ಪ್ರಯಾಣಿಕರಿಗೆ, ಉಪಯೋಗಕ್ಕೆ ಬಾರದೇ ಅನಾಥವಾಗಿದೆ. ಇತ್ತ ಬೆಳಿಗ್ಗೆ 10 ಗಂಟೆಗೆ ಮತ್ತು ಸಂಜೆ 5 ಗಂಟೆಗೆ ವಿದ್ಯಾರ್ಥಿಗಳು, ನೌಕರರು, ಪ್ರಯಾಣಿಕರ ದಟ್ಟಣೆ ಹೆಚ್ಚಾಗಿ,ನೆತ್ತಿ ಸುಡುವ ಬಿಸಿಲಿನಲ್ಲಿ ಬಸ್ಸಿಗಾಗಿ ರಸ್ತೆ ಪಕ್ಕದಲ್ಲಿ ನಿಂತು ಕಾಯಬೇಕಾಗಿ ಬಂದಿದ್ದು, ಈ ಸಮಯದಲ್ಲಿ ರಸ್ತೆಯು ಸಂತೆಯಾಗಿ ಮಾರ್ಪಟ್ಟಿರುತ್ತದೆ. ಇನ್ನಾದರೂ ಶಾಸಕರು ಜನರ ಉಪಯೋಗಕ್ಕಾಗಿಯೇ ನಿರ್ಮಾಣಗೊಂಡಿರುವ ಬಸ್ ನಿಲ್ದಾಣವನ್ನು ಉದ್ಘಾಟಿಸಿ, ಜನರ ಕಷ್ಟಗಳಿಗೆ ಮುಕ್ತಿ ನೀಡಬೇಕೆಂದು ಎಂದು ಅಂಕಲಿ ಗ್ರಾಮ ಪಂಚಾಯತ ಸದಸ್ಯ ವಿಕಾಸ ಪಾಟೀಲಯವರು ಆಗ್ರಹಿಸಿದ್ದಾರೆ.
ಒಟ್ಟಿನಲ್ಲಿ ಬಸ್ ನಿಲ್ದಾಣ ಕಾಮಗಾರಿ ಮುಗಿದು 6 ತಿಂಗಳೂ ಗತಿಸಿದರೂ ಇನ್ನೂ ಉದ್ಘಾಟನೆಯಾಗದೇ ಇರುವುದು ವಿಪರ್ಯಾಪಸದ ಸಂಗತಿ.ಆದಷ್ಟೂ ಬೇಗನೆ ಬಸ್ ನಿಲ್ದಾಣವನ್ನು ಉದ್ಘಾಟಿಸಿ ಪ್ರಯಾಣಿಕರಿಗೆ ಅನೂಕೂಲ ಮಾಡಿಕೊಡಬೇಕಾಗಿದೆ.
ಡಿ.ಕೆ.ಉಪ್ಪಾರ ಇನ್ ನ್ಯೂಸ್ ಚಿಕ್ಕೋಡಿ