Uncategorized

ವೀರಶೈವ ಮಹಾಸಭಾ ಕೇವಲ ಕರ್ನಾಟಕಕ್ಕೆ ಸೀಮಿತವಲ್ಲ ಇಡೀ ಭಾರತಕ್ಕೆ ಸೀಮಿತವಾಗಿದೆ :ಕಾಶಿ ಜಗದ್ಗುರುಗಳು

Share

ವೀರಶೈವ ಮಹಾಸಭಾ ಕೇವಲ ಕರ್ನಾಟಕಕ್ಕೆ ಕರ್ನಾಟಕ ಗೋವಾ ಮಹಾರಾಷ್ಟ್ರ ಕ್ಕೆ ಮಾತ್ರ ಸೀಮಿತವಾಗಿಲ್ಲ ಇಡೀ ಭಾರತಕ್ಕೆ ಸೀಮಿತವಾಗಿದೆ ಎಂದು ಉತ್ತರ ಪ್ರದೇಶ ವಾರಣಾಸಿ ಜಂಗಮವಾಡಿ ಮಠದ ಶ್ರೀಮದ್ ಕಾಶೀ ಜ್ಞಾನಸಿಂಹಾಸನಾಧೀಶ್ವರ ಶ್ರೀ ಶ್ರೀ ಶ್ರೀ ೧೦೦೮ ಜಗದ್ಗುರು ಡಾ ಚಂದ್ರಶೇಖರ ರಾಜದೇಶಿಕೇಂದ್ರ ಶಿವಾಚಾರ್ಯ ಮಹಾ ಭಗವತ್ಪಾದರು ಹೇಳಿದರು

ದಾವಣಗೆರೆಯಲ್ಲಿ ನಡೆಯುತ್ತಿರುವ ಅಖಿಲ ಭಾರತೀಯ ವೀರಶೈವ ಮಹಾಸಭಾ ಮಹಾಅಧಿವೇಶನದ ದಿವ್ಯ ಸಾನಿಧ್ಯ ವಹಿಸಿ ಮಾತನಾಡುತ್ತಾ ದಾವಣಗೆರೆಯಲ್ಲಿ ಬೃಹತ ವೀರಶೈವ ಮಹಾಸಭಾ ಮಹಾಅಧಿವೇಶನ ಅದ್ದೂರಿಯಾಗಿ ಜರುಗುತ್ತಿದೆ ಹಾನಗಲ್ಲ ಗುರುಕುಮಾರ ಮಹಾಸ್ವಾಮಿಗಳು ಶಿವಯೋಗ ಮಂದಿರ ನಿರ್ಮಿಸಿ ಹಾಗು ಈ ಸಂಘಟನೆಯನ್ನ ಸ್ಥಾಪಿಸಿ ನಮಗೆಲ್ಲೆ ದಾರಿದೀಪವಾಗಿದ್ದಾರೆ ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಮ್ಮ ಸಮಾಜ ಮತ್ತು ನಾವೆಲ್ಲ ಸಾಗುತ್ತಿದ್ದೇವೆ ಈ ಸಂಘಟನೆ ಕೇವಲ ಕರ್ನಾಟಕ ಗೋವಾ ಮಹಾರಾಷ್ಟ್ರ ಕ್ಕೆ ಮಾತ್ರ ಸೀಮಿತವಾಗಿಲ್ಲ ಭಾರತದ ತುಂಬಾ ನಮ್ಮ ಸಂಘಟನೆ ಇದೆ ಕಾಶಿ ಜಗದ್ಗುರುಗಳು ಉತ್ತರ ಭಾರತದಲ್ಲಿ ಸಂಚರಿಸಿ ಸಮಾಜವನ್ನು ಸಂಘಟನೆ ಮಾಡಿ ಮುಖ್ಯ ವಾಹಿನಿಗೆ ತರುವ ಕೆಲಸ ಮಾಡಿದ್ದಾರೆ ಈ ಧರ್ಮಕ್ಕೆ ಸನಾತನ ಧರ್ಮ ಎಂದು ನಾವು ಕರೆದಿದ್ದೇವೆ ಈ ಧರ್ಮ ಎಲ್ಲಾ ಯುಗದಲ್ಲಿ ಇರುವ ಧರ್ಮವಾಗಿದೆ ಮನುಕುಲಕ್ಕೆ ಸಂಸ್ಕಾರ ಕೊಡುವ ಕೆಲಸವನ್ನು ಪಂಚ ಪೀಠಗಳು ಮಾಡುತ್ತಿವೆ ಎಂದರು

ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಖಿಲ ಭಾರತೀಯ ವೀರಶೈವ ಮಹಾಸಭಾ ಹಲವು ವರ್ಷಗಳಿಂದ ಸಮಾಜವನ್ನು ಬಲಿಷ್ಟಗೊಳಿಸುತ್ತಿದೆ ಅಖಿಲ ಭಾರತೀಯ ವೀರಶೈವ ಮಹಾಸಭಾ ಅಂದರೆ ದೊಡ್ಡ ಸಂಸಾರ ಮನೆತುಂಬ ಮಕ್ಕಳಿರುವ ಮನೆತುಂಬ ಸೊಸೆ ಮತ್ತು ಮೊಮ್ಮಕ್ಕಳಿರುವ ಇರುವ ಸಂಸಾರ ಜಾತಿ ಗಣತಿಯನ್ನೆ ರಾಜಕೀಯ ಅಸ್ತ್ರವಾಗಿ ಬಳಸುವ ಪ್ರಯತ್ನ ನಡೆದಿದೆ. ವೀರಶೈವ ಲಿಂಗಾಯತರನ್ನ ಹೊರತುಪಡಿಸಿ ರಾಜ್ಯ ಆಳುವುದು ಯಾರಿಂದಲೂ ಸಾಧ್ಯವಿಲ್ಲ ಯಾಕೆ‌ ಸಾಧ್ಯವಿಲ್ಲ ಅಂದರೆ ನಮ್ಮೊಂದಿಗೆ ಎಲ್ಲಾ‌ ತಳ ಸಮುದಾಯ ಸೇರಿವೆ ಎಂದಿದ್ದಾರೆ.
ನಮ್ಮೊಂದಿಗಿನ ಒಳಪಂಗಡಗಳನ್ನು ಭೇರ್ಪಡಿಸುವ ಕೆಲಸ ಆಗಿತ್ತು. ಸಂಸ್ಕಾರದ ತಿರುಳು ಗಟ್ಟಿಯಾಗಿ ನಮ್ಮಲ್ಲಿ ಉಳಿದಿದೆ. ಜಾತಿ ಗಣತಿ ಬಗ್ಗೆ ಸ್ಪಷ್ಟ ನಿಲುವು ಇರಬೇಕು. ಶಿಕ್ಷಣ, ಆರ್ಥಿಕತೆ, ಸ್ಥಿತಿಗತಿ ಬಗ್ಗೆ ಜನಗಣತಿ ಆಗಿದೆ. ಜಾತಿಗಣತಿ ರಾಜ್ಯ ಸರ್ಕಾರದಿಂದ ಸಾಧ್ಯವಿಲ್ಲ. ಸಮಾಜದಲ್ಲಿ ಗೊಂದಲ ನಿರ್ಮಾಣ ಮಾಡಬಾರದು ಪಾರದರ್ಶಕ, ವೈಜ್ಞಾನಿಕ ಜನಗಣತಿ‌ ಆಗಬೇಕು. ಸಮಾಜಕ್ಕೆ ಅನ್ಯಾಯ ಆಗಬಾರದು ಎಂದರು.

ಇತ್ತೀಚಿನ ದಿನಗಳಲ್ಲಿ ಜಾತಿ ಗಣತಿ ಹೆಸರಿನಲ್ಲಿ ಪ್ರತ್ಯೇಕ ಮಾಡುವ ಕೆಲಸ ಕೂಡ ನಡೆಯುತ್ತಿದೆ. ಅದು ಸಾಧ್ಯವಿಲ್ಲ. ಈಗ ಕರ್ನಾಟಕದಲ್ಲಿ ಆಗಿದ್ದು‌ ಜಾತಿಗಣತಿ ಅಲ್ಲ. ಅದು ಶೈಕ್ಷಣಿಕ ಆರ್ಥಿಕ ಸಮೀಕ್ಷೆ. ಜಾತಿ ಗಣತಿ ಮಾಡುವ ಹಕ್ಕು ರಾಜ್ಯ ಸರ್ಕಾರಕ್ಕೆ ಇಲ್ಲ. ಅದು ಕೇಂದ್ರ ಸರ್ಕಾರಕ್ಕೆ ಮಾತ್ರಯಿದೆ. ಜಾತಿ ಗಣತಿ ವೈಜ್ಞಾನಿಕವಾಗಿ ನಡೆಯಬೇಕಾಗಿದೆ ಎಂದಿದ್ದಾರೆ.
ಮಹಾಸಭಾ ಅಂದರೆ ಇದೊಂದು ದೊಡ್ಡ ಸಂಸಾರ. ಮೊಮ್ಮಕ್ಕಳು, ಸೊಸೆಯಂದಿರು‌ ಬಂದುಗಳಿರುವ ಕುಟುಂಬ. ಈ ಅಧಿವೇಶನ ಕಳೆದ ವರ್ಷ ಆಗಬೇಕಿತ್ತು. ಚುನಾವಣೆ ವರ್ಷ ಆದ ಹಿನ್ನಲೆಯಲ್ಲಿ‌ಈ ಬಾರಿ ಯಶಸ್ವಿಯಾಗಿ ಅಧಿವೇಶನ ನಡೆದಿದೆ. ಅಧಿವೇಶನ ಯಶಸ್ಸಿಗಾಗಿ ಶಿವಶಂಕರಪ್ಪ ಅವರನ್ನು ಅಭಿನಂದಿಸುತ್ತೇನೆ. ಎಳ್ಳುಕಾಳಷ್ಟು ಇತರರಿಗೆ ನೋವು ಮಾಡದ ಸಮಾಜ ನಮ್ಮದು. ನಮ್ಮ ಸಂಸ್ಕಾರ, ಪರಂಪರೆ‌ ಮೂಲ ವೈಚಾರಿಕತೆ.ಎಂದರು .

ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಮಾತನಾಡುತ್ತಾ ಇವತ್ತು ೨೪ ನೇ ಮಹಾಅಧಿವೇಶನ ನಡೆಯುತ್ತಿದೆ ಅಖಿಲ ಭಾರತೀಯ ವೀರಶೈವ ಮಹಾಸಭಾ ಬೃಹತ ಮಟ್ಟದ ಸಂಘಟನೆ ನಮ್ಮ ಸಮಾಜವನ್ನ ಸಂಘಟನೆ ಮಾಡಲು ಈ ಮಹಾಸಭಾ ಪ್ರಾರಂಭವಾಯಿತು ಇದನ್ನು ಕಟ್ಟಿ ಬೆಳೆಸಿದ ಹಾನಗಲ್ಲ ಕುಮಾರಸ್ವಾಮಿಗಳನ್ನ ನೆನಸಬೇಕು ೧೯೦೪ ರಲ್ಲಿ ಅವರು ಕಟ್ಟಿರುವ ಸಂಘಟನೆ ದೊಡ್ಡ ಮಟ್ಟದಲ್ಲಿ ಬೆಳೆದಿದೆ ಅವರ ದಿಕ್ಸೂಚಿಯಾಗಿ ನಮ್ಮ ಸಮಾಜಕ್ಕೆ ಮಾರ್ಗದರ್ಶನ ಮಾಡಿದ್ದಾರೆ ನಮ್ಮ ಉತ್ತರ ಕರ್ನಾಟಕದಲ್ಲಿ ಶಿಕ್ಷಣ ಬೆಳೆಯಲು ಹಾನಗಲ್ಲ ಗುರುಕುಮಾರ ಮಹಾಸ್ವಾಮಿಗಳು ಕಾರಣರಾಗಿದ್ದಾರೆ ,ಇವತ್ತು ಈ ಸಂಘಟನೆ ಅಧ್ಯಕ್ಷರಾದ ಶಾಮನೂರು ಶಿವಶಂಕರಪ್ಪ ಅವರು ಸಂಘಟನೆ ಬೆಳೆಯಲು ನಿರಂತರವಾಗಿ ಶ್ರಮಿಸಿದ್ದಾರೆ ಎಂದರು .

ಅಧಿವೇಶನದಲ್ಲಿ ವೀರಶೈವ ಮಹಾಸಭಾ ಅಧ್ಯಕ್ಷರಾದ ಶಾಮನೂರು ಶಿವಶಂಕರಪ್ಪ,ಬೆಂಗಳೂರು ವಿಭೂತಿಪುರ ಮಠದ ಸ್ವಾಮೀಜಿಗಳು ಸಂದದ ಬಿವೈ ರಾಘವೇಂದ್ರ ,ಭಾರತೀಯ ಜನತಾ ಪಕ್ಷ ಕರ್ನಾಟಕ ರಾಜ್ಯಾಧ್ಯಕ್ಷರಾದ ಬಿವೈ ವಿಜಯೇಂದ್ರ ,ಹೊನ್ನಾಳಿಯ ಮಾಜಿ ಶಾಸಕ ರೇಣುಕಾಚಾರ್ಯ ,ದಿಂಗಾಲೇಶ್ವರ ಶ್ರೀಗಳು ಸೇರಿದಂತೆ ವೀರಶೈವ ಸಮಾಜದ ಶಾಸಕರು ಸಂಸದರು ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು .

Tags: