Uncategorized

ಅಯೋಧ್ಯೆ ರಾಮಮಂದಿರ ಉದ್ಘಾಟನೆ ಕಾರ್ಯಕ್ರಮಕ್ಕೆ ಎಲ್‌ಕೆ ಅಡ್ವಾಣಿ, ಎಂಎಂ ಜೋಶಿಗೆ ವಿಎಚ್‌ಪಿ ಆಹ್ವಾನ

Share

ರಾಮ ಮಂದಿರ ಆಂದೋಲನದ ಪ್ರವರ್ತಕರಾದ ಅಡ್ವಾಣಿ ಜಿ ಮತ್ತು ಮುರಳಿ ಮನೋಹರ್ ಜೋಷಿ ಜಿ ಅವರನ್ನು ರಾಮಮಂದಿರ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲು ಆಹ್ವಾನಿಸಲಾಗಿದೆ. ಇಬ್ಬರೂ ಬರಲು ಪ್ರಯತ್ನ ಮಾಡುವುದಾಗಿ ಹೇಳಿದ್ದಾರೆ ಎಂದು ವಿಎಚ್‌ಪಿ ಅಧ್ಯಕ್ಷ ಅಲೋಕ್ ಕುಮಾರ್ ಸಾಮಾಜಿಕ ಮಾಧ್ಯಮ ಎಕ್ಸ್​​​ನಲ್ಲಿ ಪೋಸ್ಟ್ ಮಾಡಿದ್ದಾರೆ.

ದೆಹಲಿ ಡಿಸೆಂಬರ್ 19: 1990ರಲ್ಲಿ ಪಕ್ಷ ಅಧಿಕಾರಕ್ಕೆ ಬರಲು ಕಾರಣವಾದ ರಥಯಾತ್ರೆಯಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ ಬಿಜೆಪಿ ದಿಗ್ಗಜರಾದ ಎಲ್‌ಕೆ ಅಡ್ವಾಣಿ (LK Advani) ಮತ್ತು ಮುರಳಿ ಮನೋಹರ ಜೋಶಿ (Murli Manohar Joshi) ಅವರನ್ನು ಅಯೋಧ್ಯೆಯಲ್ಲಿ (Ayodhya) ರಾಮಮಂದಿರದ  (Ram Mandir)ಉದ್ಘಾಟನೆಗೆ ವಿಶ್ವ ಹಿಂದೂ ಪರಿಷತ್ ಆಹ್ವಾನಿಸಿದೆ. ಈ ಹಿರಿಯ ನಾಯಕರ ವಯಸ್ಸನ್ನು ಪರಿಗಣಿಸಿ “ಬರಬೇಡಿ” ಎಂದು ವಿನಂತಿಸಲಾಗಿದೆ ಎಂದು ದೇವಸ್ಥಾನದ ಟ್ರಸ್ಟ್ ಅಧಿಕಾರಿಯೊಬ್ಬರು ಹೇಳಿದ ಒಂದು ದಿನದ ನಂತರ ಆಹ್ವಾನ ಬಂದಿದೆ. ಜನವರಿ 22 ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬಿಜೆಪಿಯ ಹಿರಿಯರು ತಮ್ಮ ಕೈಲಾದಷ್ಟು ಪ್ರಯತ್ನಿಸುವುದಾಗಿ ಹೇಳಿದರು ಎಂದು ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಅಧ್ಯಕ್ಷ ಅಲೋಕ್ ಕುಮಾರ್ ಹೇಳಿರುವುದಾಗಿ ಎಎನ್ಐ ಸುದ್ದಿಸಂಸ್ಥೆ ವರದಿ ಮಾಡಿದೆ.

ರಾಮ ಮಂದಿರ ಆಂದೋಲನದ ಪ್ರವರ್ತಕರಾದ ಅಡ್ವಾಣಿ ಜಿ ಮತ್ತು ಮುರಳಿ ಮನೋಹರ್ ಜೋಷಿ ಜಿ ಅವರನ್ನು ರಾಮಮಂದಿರ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲು ಆಹ್ವಾನಿಸಲಾಗಿದೆ. ಇಬ್ಬರೂ ಬರಲು ಪ್ರಯತ್ನ ಮಾಡುವುದಾಗಿ ಹೇಳಿದ್ದಾರೆ ಎಂದು ವಿಎಚ್‌ಪಿ ಅಧ್ಯಕ್ಷ ಅಲೋಕ್ ಕುಮಾರ್ ಪೋಸ್ಟ್ ಮಾಡಿದ್ದಾರೆ.

Tags: