ಬೆಳಗಾವಿ ಜಿಲ್ಲೆಯಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆ ಅಭಿಯಾನ ಯಶಸ್ವಿಯಾಗಿ ಮುಂದುವರೆದಿದ್ದು, ಇಂದು ನಗರ ಪ್ರದೇಶದ ಅಭಿಯಾನ ಬೆಳಗಾವಿ ಮಹಾನಗರ ಪಾಲಿಕೆ ಆವರಣದಲ್ಲಿ ಲೋಕಸಭಾ ಸದಸ್ಯ ಅಣ್ಣಾಸಾಹೇಬ ಜೊಲ್ಲೆ ಹಾಗೂ ರಾಜ್ಯಸಭಾ ಸದಸ್ಯರಾದ ಈರಣ್ಣ ಕಡಾಡಿ ಚಾಲನೆ ನೀಡಲಾಯಿತು.
ನಗರ ಪ್ರದೇಶದಲ್ಲಿಯೂ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ,ಪ್ರಧಾನಿ ನರೇಂದ್ರ ಮೋದಿಯವರು ಫಲಾನುಭವಿಗಳೊಂದಿಗೆ ನಡೆಸಿದ ವರ್ಚ್ಯುಯಲ್ ಸಂವಾದವನ್ನು ವೀಕ್ಷಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಸದ ಈರಣ್ಣ ಕಡಾಡಿ, “ಪ್ರಧಾನಿ ನರೇಂದ್ರ ಮೋದಿ ಅವರ ಸಮಗ್ರ ಅಭಿವೃದ್ಧಿಯ ಕನಸಿನ ಭಾರತ ನಿರ್ಮಾಣದ ಹಿನ್ನಲೆಯಲ್ಲಿ ಹಮ್ಮಿಕೊಂಡ ವಿಕಸಿತ ಭಾರತ ಸಂಕಲ್ಪ ಯಾತ್ರೆ ಬೆಳಗಾವಿ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಈಗಾಗಲೇ ಯಶಸ್ವಿಯಾಗಿ ಮುನ್ನಡೆದಿದೆ. ಪ್ರಸ್ತುತ ನಗರ ಪ್ರದೇಶಗಳಲ್ಲಿ ಮೋದಿ ಗ್ಯಾರಂಟಿ ಯೋಜನೆ ಜಾಗೃತಿಯ ವಾಹನ ಸಂಚಿಸಿ ವಿವಿಧ ಯೋಜನೆಗಳ ತಿಳುವಳಿ ನೀಡಲಾಗುತ್ತಿದೆ. ಸಾರ್ವಜನಿಕರು ಇದರ ಲಾಭ ಪಡೆದುಕೊಳ್ಳಬೇಕೆಂದು” ಕರೆ ನೀಡಿದರು.
ಶಾಸಕ ಅಭಯ ಪಾಟೀಲ, ಮಾತನಾಡಿ ” ಜನರಿಗೆ ಪ್ರಧಾನಿಯವರ ಯೋಜನೆಗಳು ಹಾಗೂ ಭವಿಷ್ಯ ನಿರ್ಮಾಣದ ಬಗ್ಗೆ ತಿಳಿಸಿಕೊಡುವ ಪ್ರಯತ್ನ ಈ ಅಭಿಯಾನದ ಮುಖ್ಯ ಉದ್ಧೇಶವಾಗಿದೆ ” ಎಂದು ತಿಳಿಸಿದರು.
ಅಲ್ಮನ್ ಗೋಕಾಕ ಎಂಬ ಮಹಿಳಾ ಫಲಾನುಭವಿ ಮಾತನಾಡಿ , “ಪ್ರಧಾನ ಮಂತ್ರಿ ಸ್ವನಿಧಿ ಯೋಜನೆಯಿಂದ ತಾವು ವ್ಯಾಪಾರಕ್ಕೆ ಹೆಚ್ಚು ಅನುಕೂಲವಾಗಿದ್ದು, ಕೌಟುಂಬಿಕ ಆರ್ಥಿಕ ಸಮಸ್ಯೆಗಳ ನಿವಾರಣೆಗೆ ಸಾಧ್ಯವಾಗಿದೆ ” ಎಂದು ತಿಳಿಸಿದ್ದಾರೆ.
ಇನ್ನೊರ್ವ ಫಲಾನುಭವಿ ಪ್ರಸಾದ ರಾಮಚಂದ್ರ ಕಾವಳೇಕರ ಮಾತನಾಡಿ ” ಫಾಸ್ಟ್ ಫುಡ್ ತಯಾರಿಗಾಗಿ ಪ್ರಧಾನಿ ಸ್ವ ನಿಧಿಯಿಂದ ಹಣಕಾಸಿನ ನೆರವು ಪಡೆದುಕೊಂಡಿದ್ದೇನೆ.ಈನೆರವು ನನ್ನ ಸ್ವಂತ ಉದ್ಯಮ ಬೆಳೆಯಲು ಹೆಚ್ಚು ಅನುಕೂಲವಾಗಿದೆ” ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಬೆಳಗಾವಿ ಮಹಾನಗರ ಪಾಲಿಕೆ ಮಹಾಪೌರ ಶೋಭಾ ಸೋಮನಾಚೆ, ಉಪಮಹಾಪೌರ ರೇಶ್ಮಾ ಪಾಟೀಲ, ವಿಕಾಸಿತ ಭಾರತ ಸಂಕಲ್ಪ ಯಾತ್ರೆಯ ಬೆಳಗಾವಿ ಮತ್ತು ಬಾಗಲಕೋಟ ಜಿಲ್ಲಾ ಪ್ರಭಾರಿ ವಿನೋಧ ಸೇಶನ್, ಜಿಲ್ಲಾ ಅಗ್ರಣಿ ಬ್ಯಾಂಕ್ ವ್ಯವಸ್ಥಾಪಕ ಪಿ. ಆರ್. ಕುಲಕರ್ಣಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.