ದಕ್ಷಿಣ ಭಾರತದ ಮಹತ್ವದ ಶಕ್ತಿಪೀಠಗಳಲ್ಲೊಂದಾದ ಬೆಳಗಾವಿ ಜಿಲ್ಲೆ, ಶಿರಸಂಗಿಯ ಶ್ರೀ ಕಾಳಿಕಾ ದೇವಸ್ಥಾನದಲ್ಲಿ ಶ್ರೀ ವಿಶ್ವಕರ್ಮ ಪೂಜಾ ಮಹೋತ್ಸವ ಇದೇ ಡಿಸೆಂಬರ್ 10 ರಿಂದ 12ರವರೆಗೆ ಅದ್ದೂರಿಯಾಗಿ ಜರುಗಲಿದೆ ಎಂದು ಶ್ರೀ ವಿಶ್ವಕರ್ಮ ಸಮಾಜ ವಿಕಾಸ ಸಂಸ್ಥೆಯ ಅಧ್ಯಕ್ಷ ಪ್ರೋ ಪಿಬಿ ಬಡಿಗೇರ್ ಅವರು ಹೇಳಿದರು
ಉತ್ಸವದ ಮೊದಲ ದಿನ ಡಿಸೆಂಬರ್ ಹತ್ತರಂದು ಮೂರು ದಿನಗಳ ವಿವಿಧ ಕಲಾ ಪ್ರದರ್ಶನದ ಉದ್ಘಾಟನೆ, ಖ್ಯಾತ ಲೋಹ ಶಿಲ್ಪಿ ಹಾಗೂ ಸಮಾಜಸೇವಕ ಬೆಂಗಳೂರಿನ ಶ್ರೀ ಬಿ ಹೊನ್ನಪ್ಪ ಚಾರ್ ಅವರಿಗೆ ಶ್ರೀ ಕಾಳಿ ಪ್ರಶಸ್ತಿ ಪ್ರದಾನ ಹಾಗೂ 12 ಜನ ವಿವಿಧ ಕ್ಷೇತ್ರಗಳ ಸಾಧಕರಿಗೆ ವಿಶ್ವಕರ್ಮ ಪ್ರಶಸ್ತಿ ಪ್ರದಾನ ಮತ್ತು 300ಕ್ಕೂ ಅಧಿಕ ಬಡ ಮತ್ತು ಪ್ರತಿಭಾವಂತ ವಿಶ್ವಕರ್ಮ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ಜರುಗಲಿದೆ. ಉತ್ಸವದ ಎರಡನೇ ದಿನ ಡಿಸೆಂಬರ್ 11ರಂದು ಬೆಳಿಗ್ಗೆ 6 ಗಂಟೆಗೆ ಶ್ರೀ ಕಾಳಿಕಾ ಕ್ಷೇತ್ರದ ಅಭಿವೃದ್ಧಿಗಾಗಿ ಸಂಸ್ಥೆ ಖರೀದಿಸಿರುವ 12 ಎಕರೆ ವಿಶಾಲ ಜಾಗೆಯಲ್ಲಿ ಶತ ಚಂಡಿಕಾ ಮಹಾಯಾಗ ಜರುಗಲಿದ್ದು ,ಬೆಂಗಳೂರಿನ ಚಂದ್ರೇಶ ಶರ್ಮ ಹಾಗೂ ಶ್ರೀ ಕಾಳಿಕಾ ದೇವಸ್ಥಾನದ ಅರ್ಚಕ ವೃಂದದವರ ಪೌರೋಹಿತ್ಯದಲ್ಲಿ ಜರುಗಲಿದೆ.
ಬೆಳಿಗ್ಗೆ 11 ರಿಂದ ಜರಗುವ ಧಾರ್ಮಿಕ ಸಭೆಯಲ್ಲಿ ಭೂದಾನಿಗಳನ್ನು ಸನ್ಮಾನಿಸಲಾಗುವುದು. ಸಂಜೆ 6:30 ರಿಂದ ದೀಪೋತ್ಸವ, ಸಿಡಿಮದ್ದು ಪ್ರದರ್ಶನ, ಸಂಗೀತ – ನೃತ್ಯ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರು ಗುವು.ಮೂರನೇ ದಿನ ಡಿಸೆಂಬರ್ 12,ಛಟ್ಟಿ ಅಮಾವಾಸ್ಯೆ ದಿನದಂದು ಜರುಗುವ ಕಾಳಿ ಸ್ತುತಿ ಹಾಗೂ ಧಾರ್ಮಿಕ ಸಭೆಯ ನಂತರ ,ಕಲಾಪ್ರದರ್ಶನದಲ್ಲಿ ಪಾಲ್ಗೊಂಡು ವಿಜೇತರಾದ ಶಿಲ್ಪಿಗಳು ,ಚಿತ್ರಕಾರರು ಹಾಗೂ ಛಾಯಾಚಿತ್ರ ಕಾರರಿಗೆ ಬಹುಮಾನ ವಿತರಣೆ ಮತ್ತು ಮಹಾಪ್ರಸಾದ ದಾನಿಗಳ ಸನ್ಮಾನ ಜರುಗುವವು. ಈ ಮೂರು ದಿನಗಳ ಉತ್ಸವದಲ್ಲಿ ಬಂಡಿಗಣಿ ನೀಲ ಮಾಣಿಕ ಸುಕ್ಷೇತ್ರದ ಶ್ರೀ ದಾನೇಶ್ವರ ಸ್ವಾಮೀಜಿ, ಸುಕ್ಷೇತ್ರ ಮುರನಾಳ ಮಳೆರಾಜೇಂದ್ರ ಮಠದ ಶ್ರೀ ಜಗನ್ನಾಥ ಸ್ವಾಮೀಜಿ, ನವಲಗುಂದ ಅಜಾತ ನಾಗಲಿಂಗೇಶ್ವರ ಮಠದ ಶ್ರೀ ವೀರೇಂದ್ರ ಸ್ವಾಮೀಜಿ ಹಾಗೂ ಯಾದಗಿರ ವಿಶ್ವಕರ್ಮ ಏಕದಂಡಗಿ ಮಠದ ಶ್ರೀನಿವಾಸ್ ಸ್ವಾಮೀಜಿಗಳು ಸೇರಿದಂತೆ ಚಿಕ್ಕುಂಬಿ, ಕಕಮರಿ ಹಾಗೂ ಯರಗಟ್ಟಿ ಮಠಗಳ ಸ್ವಾಮೀಜಿಗಳು, ಸವದತ್ತಿ ಶಾಸಕರಾದ ವಿಶ್ವಾಸ ವೈದ್ಯ ಹಾಗೂ ರಾಮದುರ್ಗ ಶಾಸಕರಾದ ಶ್ರೀ ಅಶೋಕ ಪಟ್ಟಣ ಹಾಗೂ ವಿರಾಟ್ ವಿಶ್ವ ಗ್ಲೋಬಲ್ ಪೌಂಡೇಶನ್ ಪದಾಧಿಕಾರಿಗಳು ,ರಾಷ್ಟ್ರೀಯ ಶ್ರೀ ವಿಶ್ವಕರ್ಮ ವಂಶಿ ಸೇನಾದ ಅಧ್ಯಕ್ಷ ,ಇಂದೂರಿನ ಮನೋಜ್ ನಂದ ಕಿಶೋರ ಅವರು ಸೇರಿದಂತೆ ವಿಶ್ವಕರ್ಮ ಸಮಾಜದ ಹಲವಾರು ಸಾಹಿತಿಗಳು, ಪುರೋಹಿತರು ಮತ್ತು ವಿವಿಧ ಕ್ಷೇತ್ರಗಳ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷ ಪ್ರೊ ಪಿ. ಬಿ. ಬಡಿಗೇರ್ ಅವರು ತಿಳಿಸಿದ್ದಾರೆ.
ಶಿರಸಂಗಿ ಕ್ಷೇತ್ರದಿಂದ ಕೊಡಮಾಡುವ ಪ್ರತಿಷ್ಠಿತ ಶ್ರೀ ಕಾಳಿ ಪ್ರಶಸ್ತಿಯನ್ನ ಬಿ.ಹೊನ್ನಪ್ಪ ಆಚಾರ್ಯ, ಲೋಹಿಶಿಲ್ಪಿಗಳು ಹಾಗೂ ಸಮಾಜಸೇವಕರು, ಬೆಂಗಳೂರು.” ವಿಶ್ವಶಿಲ್ಪಿ ಡಂಕಣಾಚಾರ್” ಪ್ರಶಸ್ತಿ ಪುರಸ್ಕೃತ ಶಿಲ್ಪಿ ವೇಣುಗೋಪಾಲ ಆರ್ ಬೆಂಗಳೂರ ಅವರಿಗೆ ಶ್ರೀ ಕ್ಷೇತ್ರದ ಗೌರವ ಸನ್ಮಾನ ಮಾಡಲಾಗುವುದು ಅದೇ ರೀತಿ ಹಲವು ಗಣ್ಯಮಾನ್ಯರಿಗೆ ಪ್ರಶಸ್ತಿ ನೀಡಲಾಗುವುದು .