Uncategorized

ಯುವ ವಕೀಲರು ಕಲಾಪಗಳಲ್ಲಿ ಪಾಲ್ಗೊಂಡು ಹಿರಿಯರಿಂದ ಕಲಿಯಲು ಪ್ರಯತ್ನಿಸಬೇಕು:-ಹೈಕೋರ್ಟ್ ನ್ಯಾಯಾಧೀಶ ದಿನೇಶ್ ಕುಮಾರ್ ಸಲಹೆ

Share

ಉದಯೋನ್ಮುಖ ವಕೀಲರು ನ್ಯಾಯಾಲಯದ ಕಲಾಪಗಳಲ್ಲಿ ಉತ್ಸಾಹದಿಂದ ಪಾಲ್ಗೊಂಡು ಹಿರಿಯರಿಂದ ಕಲಿಯಲು ಪ್ರಯತ್ನಿಸಬೇಕು, ಯಾವುದೇ ರೀತಿಯ ಪ್ರಕರಣದಲ್ಲಿ ಹೋರಾಡುವಾಗ ಅದನ್ನು ಎಚ್ಚರಿಕೆಯಿಂದ ಅಧ್ಯಯನ ಮಾಡಬೇಕು ಜ್ಞಾನ ಮತ್ತು ಅನುಭವದ ಮೂಲಕ ನ್ಯಾಯ ಕೊಡಿಸಲು ಬದ್ಧರಾಗಿರಿ ಎಂದು ಹೈಕೋರ್ಟ್ ನ್ಯಾಯಾಧೀಶ ಹಾಗೂ ಬೆಳಗಾವಿ ಜಿಲ್ಲಾ ಆಡಳಿತ್ಮಾಕ ನ್ಯಾಯಾಧೀಶ ಪಿ.ಎಸ್.ದಿನೇಶಕುಮಾರ್ ಹೇಳಿದರು.

ಖಾನಾಪೂರದ ಕೆಎಂಎಫ್ ನ್ಯಾಯಾಲಯದ ಆವರಣದಲ್ಲಿ ನ್ಯಾಯಾಧೀಶರ ನಿವಾಸದ ಭೂಮಿಪೂಜೆಯನ್ನು ನೇರವೇರಿಸಿ ಅವರು ಮಾತನಾಡುತ್ತಿದ್ದರು.ಇದರ ಮೊದಲು ಪೋಲಿಸ್ ಇಲಾಖೆಯಿಂದ ಗೌರವ ವಂದನೆ ಯನ್ನು ಸ್ವೀಕರಿಸಿದರು ಪೂಜಾ ವಿಧಾನಗಳನ್ನು ಅನುಸರಿಸಿ ಪೂಜಾ ಕಾರ್ಯಕ್ರಮ ನೆರವೇರಿಸಿದರು.

ತದನಂತರದಲ್ಲಿ ಖಾನಾಪೂರ ಬಾರ್ ಅಸೋಸಿಯೇಶನ್ ಅಧ್ಯಕ್ಷ ನ್ಯಾಯವಾದಿ ಈಶ್ವರ ಘಾಡಿ ಮಾತನಾಡಿ ಜನಹಿತಕ್ಕಾಗಿ ವಕೀಲ ವೃತ್ತಿಯು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದೆ ಈ ಕ್ಷೇತ್ರದ ಪಾವಿತ್ರ್ಯ ಕಾಪಾಡುವ ಮಹತ್ವದ ಜವಾಬ್ದಾರಿ ವಕೀಲ ವರ್ಗದ ಮೇಲಿದೆ ಎಂದರು.

ಈ ಹಿರಿಯ ಸಿವಿಲ್ ನ್ಯಾಯಾಧೀಶೆ ಜರೀನಾ ಅವರು ಉಪಸ್ಥಿತ ನ್ಯಾಯಾಧೀಶರಿಗೆ ಖಾನಾಪೂರದ ನ್ಯಾಯಾಲಯದ ಪರವಾಗಿ ಸ್ವಾಗತಿಸಿ ವಿವರಣೆ ನೀಡಿದರು.

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ನ್ಯಾಯಾಧೀಶನ್ನು ಗೌರವ ಪೂರ್ವಕವಾಗಿ ಸತ್ಕರಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಸಂದರ್ಭದಲ್ಲಿ ನ್ಯಾಯಾಧೀಶೆ ಜರೀನಾ, ಪ್ರಧಾನ ಜಿಲ್ಲಾ ಸತ್ರ ನ್ಯಾಯಾಧೀಶ ಎಲ್ ವಿಜಯಲಕ್ಷ್ಮೀ ನ್ಯಾಯಮೂರ್ತಿ ಮುರಳಿ ಮೋಹನ್ ರೆಡ್ಡಿ, ನ್ಯಾ,ಸೂರ್ಯನಾರಾಯಣ,ನ್ಯಾವಿರೇಶ ಹಿರೇಮಠ, ಬಾರ್ ಅಸೋಸಿಯೇಶನ್ ಅಧ್ಯಕ್ಷ ಈಶ್ವರ ಘಾಡಿ, ನ್ಯಾಯವಾದಿ ಗಳಾದ ವಿ.ಎನ್.ಪಾಟೀಲ, ಎಸ್.ಕೆ.ನಂದಗಡಿ, ಆರ್.ಎನ್..ಪಾಟೀಲ,ಚೈತನ ಮನೇರಕರ, ರಾಮ ಪಾರಿಶ್ವಾಡಕರ ಇರ್ಶಾದ್ ನಾಯಿಕ, ಇಸ್ಮಾಯಿಲ್ ಬಸರೀಕಟ್ಟಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಅಲ್ತಾಫ್.ಎಂ.ಬಸರೀಕಟ್ಟಿ
ಇನ್ ನ್ಯೂಸ್ ಖಾನಾಪೂರ

Tags: