Uncategorized

ಬೆಳಗಾವಿ ಬಿಜೆಪಿಯಲ್ಲಿ ಬಣಗಳೇ ಇಲ್ಲ: ನಾನು ಬಿಜೆಪಿ ಬಿಡಲ್ಲ: ಅಭಯ್ ಪಾಟೀಲ್

Share

ಬೆಳಗಾವಿ ಬಿಜೆಪಿಯಲ್ಲಿ ಬಣಗಳೇ ಇಲ್ಲಾ. ಸಿಎಂ ಬೊಮ್ಮಾಯಿ ಭೇಟಿ ಮಾಡಿದ ನಿಯೋಗದಲ್ಲಿ ನಾನು ಇದ್ದೇ ಬಜೆಟ್‍ನಲ್ಲಿ ಬೆಳಗಾವಿ ದಕ್ಷಿಣ ಮತಕ್ಷೇತ್ರದ ಅಭಿವೃದ್ಧಿ ಬಗ್ಗೆ ಮಾತ್ರ ಚರ್ಚೆ ಮಾಡಿದ್ದೇವೆ. ಜಾರಕಿಹೊಳಿ ಬ್ರದರ್ಸ್ ವಿರುದ್ಧ ದೂರು ನೀಡುವ ವಿಚಾರ ಚರ್ಚೆ ಆಗಿಲ್ಲ ಎಂದು ದಕ್ಷಿಣ ಶಾಸಕ ಅಭಯ್ ಪಾಟೀಲ್ ಸ್ಪಷ್ಟಪಡಿಸಿದ್ದಾರೆ.

ಬೆಳಗಾವಿ ಬಿಜೆಪಿಯಲ್ಲಿ ಬಣ ರಾಜಕೀಯ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅಭಯ್ ಪಾಟೀಲ್ ನೀವೇ ಆ ಬಣ ಈ ಬಣ ಅಂತಾ ಹೇಳ್ತಿದ್ದಿರಿ. ನಾನು ನೋಡಬೇಕಿದೆ ಯಾವ ಬಣ ಅಂತಾ, ಬಣ ರಾಜಕಾರಣದ ಬಗ್ಗೆ ಯಾರು ಏನು ಹೇಳಿದ್ದಾರೆ ನನಗೆ ಗೊತ್ತಿಲ್ಲ. ನಾನು ಪಕ್ಷ ಸಂಘಟನೆಯಿಂದ ಬಂದವನು. ಹೀಗಾಗಿ ಬಿಜೆಪಿಯಲ್ಲಿ ಬಣ ರಾಜಕಾರಣವೇ ಇಲ್ಲ. ಬೆಳಗಾವಿ ಬಿಜೆಪಿಯಲ್ಲಿ ಎಲ್ಲವೂ ಸರಿಯಿದೆ ಅಂತಾನೇ ಪಕ್ಷದ ಸಂಘಟನೆ ಗಟ್ಟಿಯಿದೆ. ಸಿಎಂ ಬೊಮ್ಮಾಯಿ ಮನೆಯಲ್ಲಿ ಕ್ಲೋಸ್ ಡೋರ್ ಮೀಟಿಂಗ್ ಆಗಿಲ್ಲ ಎಂದರು.

ಇನ್ನು ಜಾರಕಿಹೊಳಿ ಬ್ರದರ್ಸ್ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡದ ಅಭಯ ಪಾಟೀಲ್ ನಾನು ನನ್ನ ಇತಿಮಿತಿಯಲ್ಲಿ ಇದ್ದೇನೆ. ಬೇರೆ ಪಕ್ಷದವರೇ ನಮ್ಮ ಬಿಜೆಪಿ ಪಕ್ಷಕ್ಕೆ ಬರಬಹುದು. ಆದ್ರೆ ಬಿಜೆಪಿ ಪಕ್ಷ ಬಿಟ್ಟು ಯಾರು ಹೋಗುವುದಿಲ್ಲ. ಯಾರ್ಯಾರು ಸಿಎಂ ಆಗೋ ಕನಸು ಕಾಣುತ್ತಿದ್ದಾರೆ ಅವರಿಗೆ ಈ ಬಜೆಟ್ ಬಳಿಕ ಉತ್ತರ ಸಿಗಲಿದೆ. ಸತೀಶ್ ಜಾರಕಿಹೊಳಿ ಪಕ್ಷಾಂತರ ಪರ್ವ ಹೇಳಿಕೆ ವಿಚಾರಕ್ಕೆ ಉತ್ತರಿಸದ ಅಭಯ ಪಾಟೀಲ್ ನಿಮ್ಮ ಹತ್ತಿರ ಬೇರೆ ಪ್ರಶ್ನೆ ಇದ್ದರೇ ಕೇಳಿ. ಇನ್ನು ನಾನು ಬಿಜೆಪಿ ಪಕ್ಷ ಬಿಡುವ ಪ್ರಶ್ನೆಯೇ ಇಲ್ಲಾ. ಈ ಪ್ರಶ್ನೆ ನನಗೆ ಕೇಳುವ ಅಗತ್ಯವೇ ಇಲ್ಲ. ಪಕ್ಷ ಸಂಘಟನೆ ವಿಚಾರದಲ್ಲಿ ಪಕ್ಷ ಯೋಗ್ಯ ತೀರ್ಮಾನ ಮಾಡುತ್ತದೆ. ಸಂಘಟನೆಯಿಂದ ಬಂದವರಿಗೆ ಪಕ್ಷ ಕೊಟ್ಟ ಜವಾಬ್ದಾರಿ ನಿರ್ವಹಿಸುತ್ತೇನೆ ಎಂದರು.

ಇನ್ನು ಫೆಬ್ರವರಿ ಎರಡನೇ ವಾರದಲ್ಲಿ ಮೇಯರ್, ಉಪಮೇಯರ್ ಚುನಾವಣೆಗೆ ದಿನಾಂಕ ನಿಗದಿ ಆಗಲಿದೆ. ಅಧಿವೇಶನ ನಡೆಯುವುದರಿಂದ ಮುಂದೆ ಹೋಗುತ್ತಾ ಇಲ್ಲಾ ಅನ್ನೋದು ಗೊತ್ತಿಲ್ಲ. ಅಧಿವೇಶನಕ್ಕೂ ಮೊದಲು ಮೇಯರ್, ಉಪ ಮೇಯರ್ ಚುನಾವಣೆ ಆಗಬೇಕು. ಯಾರು ಮೇಯರ್ ಆಗಬೇಕು ಅನ್ನೋದು ಇನ್ನೂ ಚರ್ಚೆ ಆಗಿಲ್ಲ. ನಮ್ಮಲ್ಲಿ ಒಬ್ಬರೇ ತೀರ್ಮಾನ ಮಾಡಲ್ಲ. ಪಕ್ಷದ ಹೈಕಮಾಂಡ್, ಕೋರ್ ಕಮಿಟಿಯಲ್ಲಿ ತೀರ್ಮಾನ ಆಗಿಲಿದೆ, ಆ ತೀರ್ಮಾನವೇ ಅಂತಿಮ. ಚುನಾವಣಾ ದಿನಾಂಕ ನಿಗದಿಯಾದ ಬಳಿಕವೇ ಕೋರ್ ಕಮಿಟಿ ಸಭೆ ಮಾಡ್ತಿವಿ. ಸದಸ್ಯರ ಅಭಿಪ್ರಾಯ ಪಡೆದು, ಮಹಾನಗರ ಕೋರ್ ಕಮಿಟಿಯಲ್ಲಿ ಚರ್ಚಿಸಿ ಅಭ್ಯರ್ಥಿ ಹೆಸರನ್ನು ಹೈಕಮಾಂಡ್‍ಗೆ ಕಳುಹಿಸಲಾಗುವುದು ಎಂದರು.

ಇಂದಿನಿಂದ ಗೋವಾದಲ್ಲಿ ಗೃಹ ಸಚಿವ ಅಮಿತ್ ಶಾ ಪ್ರಚಾರಕ್ಕೆ ಬರ್ತಿದ್ದಾರೆ. ಗೋವಾದಲ್ಲಿ ನಮ್ಮ ರಾಜ್ಯದ ಮತದಾರರು ಬಿಜೆಪಿ ಪಕ್ಷದ ಪರವಾಗಿ ಇದ್ದಾರೆ. ನಾನು ವಾಸ್ಕೋದಲ್ಲಿ ಮತದಾರರಿಗೆ ಭರವಸೆ ಕೊಟ್ಟಿರುವೆ. ಚುನಾವಣೆ ಬಳಿಕ ನಾ ಮತ್ತೆ ಹೋಗಿ ಅವರ ಸಮಸ್ಯೆಗಳಿಗೆ ಸ್ಪಂದಿಸುತ್ತೇನೆ. ನಾನು ಬರಿ ಚುನಾವಣೆಗೆ ಸಿಮೀತವಾಗಿ ಅಲ್ಲ ಅವರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತೇನೆ. ನಮ್ಮ ಸಿಎಂ ಬೊಮ್ಮಾಯಿ ಅವರಿಗೆ ಮತ್ತು ಗೋವಾ ಸಿಎಂ ಅವರ ಗಮನಕ್ಕೆ ತರುವ ಕೆಲಸ ಮಾಡುವೆ ಎಂದು ಅಭಯ್ ಪಾಟೀಲ್ ಹೇಳಿದರು.

ಒಟ್ಟಿನಲ್ಲಿ ಬೆಳಗಾವಿ ಬಿಜೆಪಿಯಲ್ಲಿ ಬಣ ರಾಜಕೀಯ ಇಲ್ಲ. ನಾನು ಬಿಜೆಪಿ ಬಿಡುವ ಪ್ರಶ್ನೆಯೇ ಇಲ್ಲ ಎಂದು ಅಭಯ್ ಪಾಟೀಲ್ ಸ್ಪಷ್ಟಪಡಿಸಿದರು.

 

 

Tags: