Uncategorized

ಬೆಳಗಾವಿಯಲ್ಲಿ ವಿಮಲಾ ಫೌಂಡೇಶನ್‍ನಿಂದ ಕುಸುರೆಳ್ಳಿನಿಂದ ಮಾಡಿದ ಆಭರಣಗಳ ಪ್ರದರ್ಶನ

Share

ವಿಮಲ ಫೌಂಡೇಶನ್ ಪ್ರಾಯೋಜಕತ್ವದಲ್ಲಿ ಪ್ರಾಜಕ್ತಾ ಬೇಡೇಕರ್ ತಯಾರಿಸಿದ ಸುಂದರ ಪ್ರತಿಷ್ಠಿತ ಪೋತದಾರ್ ಜುವೆಲರ್ಸ್ ಹಾಲ್ ಮಾರ್ಕ ಉಳ್ಳ ಚಿನ್ನ ಮತ್ತು ಕುಸುರೆಳ್ಳು ಬಳಕೆ ಮಾಡಿ ತಯಾರಿಸಿದ ಆಭರಣಗಳ ಪ್ರದರ್ಶನ ಏರ್ಪಡಿಸಲಾಗಿತ್ತು.

ಬೆಳಗಾವಿಯ ಅನ್ಸೂರ್‍ಕರ್ ಗಲ್ಲಿಯ ಛತ್ರೇವಾಡಾದಲ್ಲಿ ನಡೆದ ಆಭರಣ ಪ್ರದರ್ಶನ ಕಾರ್ಯಕ್ರಮಕ್ಕೆ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಲಾಯಿತು. ಬಂಗಾರ ಹಾಗೂ ಕುಸುರೆಳ್ಳಿನಿಂದ ಮಾಡಿದ ವಿವಿಧ ಬಗೆಯ ಆಭರಣಗಳ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಪ್ರಾಜಕ್ತಾ ಬೇಡೇಕರ್‍ರ ಸುಂದರ ಪರಿಕಲ್ಪನೆಯನ್ನು ಮೂಡಿಬಂದ ಕೃಷ್ಣ ರಾಧಾ, ಹಾಗೂ ಬಾಲಕೃಷ್ಣರ ವಿವಿಧ ಆಭರಣಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಾಜಕ್ತಾ ಬೇಡೇಕರ್, ಕುಸರೆಳ್ಳಿ ಬಳಕೆ ಮಾಡಿಕೊಂಡು ಚಿನ್ನದಲ್ಲಿ ಆಭರಣ ತಯಾರಿ ಮಾಡುವ ಉದ್ದೇಶದಿಂದ ಈ ಕಾರ್ಯ ಮಾಡಲಾಗಿದೆ. ಇನ್ನು ಅನೀಲ್ ಪೋತದಾರರು ನನಗೆ ಸಹಾಯ ಮಾಡಿದ್ದಾರೆ. ಇನ್ನು ವಿಮಲ್ ಫೌಂಡೇಶನ್ ವತಿಯಿಂದ ಈ ಪ್ರದರ್ಶನವನ್ನು ಆಯೋಜಿಸಲಾಗಿದೆ ಎಂದು ತಯಾರಾದ ಆಭರಣಗಳ ಕುರಿತಂತೆ ಮಾಹಿತಿ ನೀಡಿದರು.

ಈ ವೇಳೆ ಸೋನಾಲಿ ಸರ್ನೋಬತ್ ಮಾತನಾಡಿ, ಕುಸುರೆಳ್ಳಿನಲ್ಲಿ ಬಂಗಾರವನ್ನು ಬಳಕೆ ಮಾಡಿ ಆಭರಣಗಳನಗ್ನು ತಯಾರಿ ಮಾಡಿದ್ದಾರೆ. ಈ ವೇಳೆ ಪ್ರಾಜಕ್ತಾ ಬೇಡೇಕರ್ ರವರನ್ನು ಅಭಿನಂದಿಸುತ್ತೇನೆ. ಇತ್ತಿಚಿನ ದಿನಗಳಲ್ಲಿ ಇದೊಂದು ಬ್ರಹತ್ ಉದ್ಯೋಗವಾಗಿ ಮಾರ್ಪಡುತ್ತಿದೆ.

ಹಾಗಾಗಿ ಇವರೊಬ್ಬ ಯುವ ಉದ್ಯೋಗಿಗಳಾಗಿ ಮಾರ್ಪಡುತ್ತಿರುವುದು ಸಂತಸದ ವಿಚಾರ ಎಂದರು.
ಇನ್ನು ಕುಸುರೆಳ್ಳಿನಲ್ಲಿ ಅರಳಿದ ಈ ಕಲೆ ಎಳ್ಳು ಬೆಲ್ಲದಂತೆ ಎಲ್ಲೆಡೆ ಸಿಹಿಯನ್ನು ಹರಡಲಿ ಎಂದು ಕುಂದಾನಗರಿಯ ಸಾರ್ವಜನಿಕರು ಹಾರೈಸಿದ್ದಾರೆ.

 

Tags: