Uncategorized

ರಮೇಶ ಜಾರಕಿಹೊಳಿಯದ್ದು ಟುಸ್ಸ್ ಬಾಂಬ್: ಸತೀಶ ಜಾರಕಿಹೊಳಿ ಲೇವಡಿ..!

Share

ರಮೇಶ ಜಾರಕಿಹೊಳಿ ಮೇಲಿಂದ ಮೇಲೆ ಹೊಸ ಹೊಸ ಬಾಂಬ್ ಹಾಕುತ್ತಿರುತ್ತಾರೆ, ಕೆಲವು ಬಾಂಬ್ ಸಿಡಿಯುತ್ತೆ ಇನ್ನೂ ಕೆಲವು ಸ್ಫೋಟವಾಗಲ್ಲ. ನಾವೂ ರಮೇಶ ಜಾರಕಿಹೊಳಿ ಬಾಂಬ್ ಸಿಡಿಯುತ್ತೆ ಅಂತಾ ಕಿವಿ ಮುಚ್ಚಿಕೊಂಡು ನಿಲ್ಲಬೇಕು ಅμÉ್ಟೀ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ವ್ಯಂಗವಾಡಿದರು.

ಗೋಕಾಕ್‍ನಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಸತೀಶ ಜಾರಕಿಹೊಳಿ ಕಾಂಗ್ರೆಸ್ ಬಿಟ್ಟು 16 ಜನ ಬಿಜೆಪಿಗೆ ಬರ್ತಾರೆ ಎಂಬ ರಮೇಶ ಜಾರಕಿಹೊಳಿ ಹೇಳಿಕೆಗೆ ಬಿಜೆಪಿಯಲ್ಲಿ 120 ಸೀಟ್ ಇವೆ ಅವಷ್ಟು ಈಗಾಗಲೇ ಹೌಸ್ ಫುಲ್ ಆಗಿವೆ. ಇನ್ನೂ 16 ಜನರನ್ನ ಎಲ್ಲಿ ಕೂಡಿಸುತ್ತೀರಿ ನೀವು ಎಂದು ಪ್ರಶ್ನಿಸಿದರು. ಕಾಂಗ್ರೆಸ್ ಪಕ್ಷ ಬಿಟ್ಟು ಬರೋರನ್ನ ಟಾಪ್ ಮೇಲಾ, ಕೆಳಗಾ, ಡಿಕ್ಕಿಯಲ್ಲಾ, ಎಲ್ಲಿ ಕೂಡಿಸುತ್ತೀರಿ ಅವರನ್ನು ಎಂದು ಲೇವಡಿ ಮಾಡಿದರು.
ರಮೇಶ ಜಾರಕಿಹೊಳಿ ಟೈಮ್ ಪಾಸ್ ಮಾಡ್ತಿರುತ್ತಾರೆ.

ರಮೇಶ ಮತ್ತು ಲಖನ್ ರಾಜಕೀಯ ವ್ಯಾಪಾರ ಮಾಡ್ತಾ ಕೂರುವವರು. ಇವರೇನೂ ಸಮಾಜ ಸೇವೆ ಮಾಡುವವರಲ್ಲ. ರಮೇಶ ಮತ್ತು ಲಖನ್ ಜಾರಕಿಹೊಳಿ ಬಿಜೆಪಿಗೆ ಹೋಗ್ತೆವಿ ಅಂತಾ ಕಾಂಗ್ರೆಸ್‍ನವರಿಗೆ ಬ್ಲ್ಯಾಕ್ ಮೇಲ್ ಮಾಡ್ತಾರೆ. ಕಾಂಗ್ರೆಸ್‍ಗೆ ಹೋಗ್ತೆವಿ ಅಂತಾ ಬಿಜೆಪಿಯವರಿಗೆ ಬ್ಲ್ಯಾಕ್ ಮೇಲ್ ಮಾಡ್ತಾರೆ. ಇನ್ನು ಕಾಂಗ್ರೆಸ್‍ಗೆ ಬರಲು ಬಿಜೆಪಿ, ಜೆಡಿಎಸ್ ಶಾಸಕರು ಸಂಪರ್ಕದಲ್ಲಿದ್ದು. ರಮೇಶ ಜಾರಕಿಹೊಳಿಯದ್ದು ಟುಸ್ಸ್ ಬಾಂಬ್ ಎಂದು ವ್ಯಂಗ್ಯವಾಡಿದರು.

Tags: