ಖಾನಾಪುರ ತಾಲೂಕಿನ ನಂದಗಡ ಗ್ರಾಮ ಪಂಚಾಯಿತಿ ಸದಸ್ಯೆ ವೈಷ್ಣವಿ ಪಾಟೀಲ್ ವೃದ್ಧಾಶ್ರಮದಲ್ಲಿ ಹಿರಿಯ ನಾಗರಿಕರ ಜೊತೆಗೆ ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ.
ಹೌದು ಸಾಮಾನ್ಯವಾಗಿ ತಮ್ಮ, ತಮ್ಮ ಹುಟ್ಟುಹಬ್ಬವನ್ನು ವಿಜೃಂಭಣೆಯಿಂದ ತಮ್ಮ ಮನೆಯಲ್ಲಿಯೋ..? ಅಥವಾ ಹೋಟೆಲ್ಗಳಲ್ಲಿಯೋ ಎಲ್ಲರೂ ಆಚರಿಸಿಕೊಳ್ಳುವುದನ್ನು ನಾವು ನೀವೆಲ್ಲಾ ನೋಡಿದ್ದೇವೆ.
ಆದರೆ ಒಬ್ಬ ಜನಪ್ರತಿನಿಧಿಯಾಗಿ, ಜನಸೇವೆಯಲ್ಲಿ ತೊಡಗಿಕೊಂಡಿರುವ ನಂದಗಡ ಗ್ರಾ.ಪಂ.ಸದಸ್ಯೆ ವೈಷವಿ ಪಾಟೀಲ ಬೆಳಗಾವಿಯ ಶಾಹು ನಗರದ ಮಲ್ಲಿಕಾರ್ಜುನ ಹಿರಿಯ ನಾಗರಿಕರ ವೃದ್ಧಾಶ್ರಮದಲ್ಲಿ ಹಿರಿಯ ನಾಗರಿಕರೊಂದಿಗೆ ಬೆರೆತು ಅವರೊಂದಿಗೆ ಸುಖ, ದುಃಖ ಹಂಚಿಕೊಳ್ಳುವ ಮೂಲಕ ತಮ್ಮ ಹುಟ್ಟ ಆಚರಿಸಿಕೊಳ್ಳುವ ಮೂಲಕ ಸರಳತೆ ಮೆರೆದರು.
ಈ ಸಂದರ್ಭದಲ್ಲಿ ಹಿರಿಯ ನಾಗರಿಕರೊಂದಿಗೆ ಕೇಕ್ ಕಟ್ ಮಾಡಿ, ಅವರಿಗೆ ಅಲ್ಪೋಹಾರ ನೀಡಿ, ಅವರಿಗೆ ಬ್ಲ್ಯಾಂಕೇಟ್, ಮಾಸ್ಕ್ ಸೇರಿದಂತೆ ಇನ್ನಿತರ ವಸ್ತುಗಳನ್ನು ನೀಡಿ ಅರ್ಥ ಪೂರ್ಣವಾಗಿ ತಮ್ಮ ಜನುಮ ದಿನ ಆಚರಿಸಿಕೊಂಡರು.
ಇದರಿಂದ ಹಿರಿಯ ನಾಗರಿಕರಿಗೆ ಬಹಳಷ್ಟು ಸಂತಸವಾಯಿತು. ಬಳಿಕ ಹಿರಿಯರು ಮನಃಪೂರ್ವಕವಾಗಿ ವೈಷವಿ ಪಾಟೀಲ ಅವರನ್ನು ಆಶೀರ್ವದಿಸಿದರು.