ನಿನ್ನೆ ರಾತ್ರಿ ಸನ್ಮಾನ್ಯ ಡಿಕೆ ಶಿವಕುಮಾರ್ ಗೂಂಡಾಗಳನ್ನು ಕಳಸಿ ನನ್ನ ಮನೆಗೆ ಅಶ್ಲೀಲ ಫೋಟೋ ಹಚ್ಚಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರು ಅಲ್ಲ ಅವರು ಡಿಕೆಶಿಯ ಗೂಂಡಾಗಳು ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದರು
ಬೆಂಗಳೂರಿನ ನಿವಾಸಕ್ಕೆ ಅಶ್ಲೀಲ ಫೋಟೋ ಅಂಟಿಸಿದ ಹಿನ್ನೆಲೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಇಂದು ಸುದ್ದಿಗೋಷ್ಠಿ ನಡೆಸಿದರು. ನಿನ್ನೆ ರಾತ್ರಿ ಸನ್ಮಾನ್ಯ ಡಿಕೆ ಶಿವಕುಮಾರ್ ಗೂಂಡಾಗಳನ್ನು ಕಳಸಿ ಮನೆಗೆ ಅಶ್ಲೀಲ ಫೋಟೋ ಹಚ್ಚಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರು ಅಲ್ಲ ಅವರು ಡಿಕೆಶಿಯ ಗೂಂಡಾಗಳು ಎಂದು ಹೇಳಿದರು. ಸಿಡಿ ಪ್ರಕರಣದಲ್ಲಿ ಅಪಮಾನ ಮಾಡಿದ. ಏನ್ ಬೇಕಾದ್ರು ಮಾಡಬಹುದು ಇತ್ತು. ಕೊತ್ವಾಲ ರಾಮಚಂದ್ರನ ಶಿಷ್ಯ ಇಂದು ಈ ರೀತಿ ಮಾಡಿದ್ದಾರೆ. ಪೋಸ್ಟರ್ ಅಂಟಿಸಿದ ಸಂಬಂಧ ಗೋಕಾಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇನೆ ಎಂಬ ವಿಚಾರವನ್ನು ರಮೇಶ್ ಜಾರಕಿಹೊಳಿ ತಿಳಿಸಿದರು.
ಸಿಡಿ ಪ್ರಕರಣ ಸಿಬಿಐಗೆ ವಹಿಸಲು ಪತ್ರದ ಮೂಲಕ ಸಿಎಂ ಸಿದ್ದರಾಮಯ್ಯವರನ್ನು ಒತ್ತಾಯಿಸುತ್ತೇನೆ. ಸದಾಶಿವ ನಗರದ ಕೇಸ್ ಅನ್ನು ಸಿಬಿಐ ವಹಿಸಬೇಕು ಎಂದು ಗೃಹ ಸಚಿವ, ಡಿಐಜಿಗೆ ಪತ್ರ ಬರೆಯುತ್ತೇನೆ ಎಂದು ರಮೇಶ್ ಜಾರಕಿಹೊಳಿ ಆಗ್ರಹಿಸಿದರು.ಸಿಡಿಯಲ್ಲಿ ಡಿಕೆ ಶಿವಕುಮಾರ್ ನೇರ ಪಾತ್ರವಿದೆ. ಇಲ್ಲವಾದಲ್ಲಿ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ. ರಮೇಶ್ ಜಾರಕಿಹೊಳಿ ಮುಗಿಸಿದ್ದೇನೆ ಎಂದು ಹೇಳಿದ ಆಡಿಯೋ ಇದೆ. ಸಿಬಿಐ ತನಿಖೆ ಆದ್ರೆ ಎಲ್ಲಾ ದಾಖಲೆ ಕೊಡುತ್ತೇನೆ ಎಂದು ಸ್ಪೋಟಕ ಹೇಳಿಕೆ ನೀಡಿದರು.
ಡಿಕೆ ಶಿವಕುಮಾರ್ ಬಹಳ ವೀಕ್ ಮನುಷ್ಯ, ಕೇವಲ ಬ್ಲ್ಯಾಕ್ ಮೇಲೆ ಮಾಡೋದು ಅವನ ಕೆಲಸ. ಡಿಕೆ ಶಿವಕುಮಾರ್ ಸಿಡಿ ಫ್ಯಾಕ್ಟರಿ ಬಂದ್ ಆಗಬೇಕು ಅಂದ್ರೆ ಸಿಬಿಐಗೆ ವಹಿಸಬೇಕು. ಹೈಕೋರ್ಟ್ ಇಲ್ಲವೇ ಸುಪ್ರೀಂ ಕೋರ್ಟ್ ಮೆಟ್ಟಿಲು ಏರುತ್ತೇನೆ ಎಂದರು. ಆಪರೇಷನ್ ಕಮಲ ಸಾಧ್ಯವೇ ಇಲ್ಲ. ಆದರೆ ಮಹಾರಾಷ್ಟ್ರ ಮಾದರಿಯಲ್ಲಿ ಸರ್ಕಾರ ಪತನ ಆಗಬೇಕು. ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಇಲ್ಲವೇ ಮತ್ಯಾರಾದ್ರು ಬಂಡಾಯ ಏಳಬೇಕು. ಒಂದು ತಂಡ ರಚನೆಯಾಗಿ ಹೊರ ಬಂದ್ರೆ ಮಾತ್ರ ಸರ್ಕಾರ ಬೀಳಲಿದೆ ಎಂದು ಭವಿಷ್ಯ ನುಡಿದರು
ನನ್ನ ಮೇಲೆ ಕೇಸ್ ದಾಖಲಾದ್ರೆ ನಾನು ಹೋರಾಟ ಮಾಡುತ್ತೇನೆ. ನಾನು ಯಾವುದೇ ಕಾರಣಕ್ಕೂ ಹೆದರಲ್ಲ. ನಾನು ಒಬ್ಬನೇ ರಮೇಶ್ ಜಾರಕಿಹೊಳಿ ಸಾಕು, ನಾನು ಜೀವನದಲ್ಲಿ ಖರ್ಗೆಗೆ ಒಬ್ಬರಿಗೆ ಕಾಲು ಬಿದ್ದಿರಬೇಕು ಎಂದರು.
ಪರಶಿವಮೂರ್ತಿ ಡಿಕೆಶಿ ಕಾರ್ ಚಾಲಕನನ್ನು ಯಾಕೆ ವಿಚಾರಣೆಗೆ ಒಳಪಡಿಸಿಲ್ಲ. ಬಿಜೆಪಿ ಸರ್ಕಾರ ಇದ್ದಾಗ ಯಾಕೆ ವಿಚಾರಣೆ ಮಾಡಲಿಲ್ಲ. ಅಲ್ಲೇ ಇರೋದು ಟ್ವಿಸ್ಟ್, ನನ್ನ ಮಾತಿನಿಂದ ಬಿಜೆಪಿಗೆ ಮುಜುಗರ ಆಗೋದು ಬೇಡ ಎಂದು ಪರೋಕ್ಷವಾಗಿ ಬಿಜೆಪಿ ನಾಯಕರ ವಿರುದ್ಧವೂ ಅಸಮಾಧಾನ ಹೊರ ಹಾಕಿದರು.
ಸೋನಿಯಾ ಗಾಂಧಿಯವರೆಗೆ ಡಿಕೆಶಿ ಬ್ಲ್ಯಾಕ್ ಮೇಲ್ ಇದೆ. ಸೋನಿಯಾ ತಿಹಾರ ಜೈಲಿಗೆ ಹೋಗಿ ಡಿಕೆಶಿ ಭೇಟಿಯಾದ್ರು. ಸಿಡಿ ಪ್ರಕರಣವನ್ನು ಸಿಬಿಐಗೆ ಕೊಟ್ರೆ ಅನೇಕ ಪ್ರಕರಣ ಬಯಲಾಗುವುದು. ಸಿಎಂ ಸಿದ್ದರಾಮಯ್ಯಗೆ ಭೇಟಿಯಾಗಿ ಮನವಿ ಮಾಡುತ್ತೇನೆ. ಇಲ್ಲವೇ ಪಕ್ಷದ ವೇದಿಕೆಯಲ್ಲಿ ಚರ್ಚಿಸಿ ಹೋರಾಟ ಮಾಡುವ ವಿಷಯವನ್ನು ತಿಳಿಸಿದರು.
ನಾಲ್ಕು ವರ್ಷಗಳಿಂದ ಅಪಮಾನ ಸಹಿಸಿಕೊಂಡಿದ್ದೇನೆ. ನಾನು ದಾಖಲೆ ಕೊಡದೇ ಇದ್ರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡ್ತೇನೆ. ಡಿಕೆಶಿ ಅಂತ್ಯವಾದ್ರೆ ರಾಜಕಾರಣದಲ್ಲಿ ಒಳ್ಳೆಯದು. ಸೋನಿಯಾ ಗಾಂಧಿ ಬಗ್ಗೆ ಮಾತನಾಡಿದ್ದು ಆಡಿಯೋ ಇದೆ ಎಂದು ಸ್ಪೋಟಕ ಹೇಳಿಕೆ ನೀಡಿದರು.
ಮುಂದಿನ ವಾರದಲ್ಲಿ ದೆಹಲಿಗೆ ಹೋಗಿ ಡಿಕೆ ಶಿವಕುಮಾರ್ ಮತ್ತು ರವಿ ಗಾಣಿಗ ಹೆಸರು ಉಲ್ಲೇಖಿಸಿ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ದೂರು ನೀಡುವೆ ಎಂದರು.
ಒಟ್ಟಿನಲ್ಲಿ ಡಿಕೆಶಿವಕುಮಾರ ವರ್ಸಸ್ ರಮೇಶ ಜಾರಕಿಹೊಳಿ ಚದುರಂಗದ ಆಟದಲ್ಲಿ ಯಾರು ಗೆಲ್ಲುತ್ತಾರೆ ಎಂಬುದನ್ನು ಕಾದುನೋಡಬೇಕಿದೆ ,